ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11: ಅಮೆರಿಕ ಕೋರ್ಟ್‌ನಲ್ಲಿ ರಾಣಾ, ಹೆಡ್ಲಿ ವಿರುದ್ಧ ಆರೋಪಪಟ್ಟಿ (Headley | Rana, Pakistan | 26/11 | Danish newspaper)
Bookmark and Share Feedback Print
 
ವಾಣಿಜ್ಯ ನಗರಿ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಶಂಕಿತ ಉಗ್ರ ಹುಸೈನ್ ರಾಣಾ ಹಾಗೂ ಡೇವಿಡ್ ಕೋಲೆಮನ್ ಹೆಡ್ಲಿ ವಿರುದ್ಧ ಚಿಕಾಗೋ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ.

ರಾಣಾ ಮುಂಬೈ ದಾಳಿ ಯೋಜನೆಯ ರೂವಾರಿಯಾಗಿರುವುದಾಗಿ ಆರೋಪಿಸಿರುವ ಎಫ್‍‌ಬಿಐ ಅಲ್ಲದೆ, ಪಾಕ್ ಮೂಲದ ಅಮೆರಿಕ ಪ್ರಜೆ ಹೆಡ್ಲಿಗೂ ಕೂಡ ಈತ ಸಲಹೆ ನೀಡಿರುವುದಾಗಿ ಹೇಳಿದೆ. ಹೆಡ್ಲಿ ಹಾಗೂ ರಾಣಾ ವಿರುದ್ಧ ಮುಂಬೈ ದಾಳಿ ಹಾಗೂ ಡೆನ್ಮಾರ್ಕ್ ಪತ್ರಿಕಾ ಕಚೇರಿಯೊಂದನ್ನು ಸ್ಫೋಟಿಸಲು ಸಂಚು ರೂಪಿಸಿರುವ ಬಗ್ಗೆಯೂ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆನ್ಮಾರ್ಕ್ ಪತ್ರಿಕಾ ಕಚೇರಿ ಸ್ಫೋಟ ಸಂಚಿನಲ್ಲೂ ಭಾಗಿಯಾಗಿರುವ ರಾಣಾ ಪಾಕಿಸ್ತಾನದಲ್ಲಿರುವ ಅಲ್ ಖಾಯಿದಾ ಮುಖಂಡರು ಹಾಗೂ ಅಬ್ದುರ್ ರೆಹಮಾನ್ ಹಾಶೀಂ ಸೈಯದ್, ಪಾಕಿಸ್ತಾನ ಮಿಲಿಟರಿ ನಿವೃತ್ತ ಮೇಜರ್ ಜೊತೆಯೂ ಸಂಪರ್ಕ ಹೊಂದಿರುವುದಾಗಿ ಅಮೆರಿಕ ತಿಳಿಸಿದೆ. ಈಗಾಗಲೇ ರಾಣಾ ಮತ್ತು ಅಬ್ದುರ್ ರೆಹಮಾನ್ ವಿರುದ್ಧ ನ್ಯಾಯಾಲಯದಲ್ಲಿ ಸಂಚಿನ ಬಗ್ಗೆ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ತಿಳಿಸಿದೆ.

ಏತನ್ಮಧ್ಯೆ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಹಸ್ತಾಂತರಕ್ಕೆ ಎಫ್‌ಬಿಐ ನಕಾರ ವ್ಯಕ್ತಪಡಿಸಿದ್ದು, ಮೊದಲು ಅಮೆರಿಕದಲ್ಲಿಯೇ ಹೆಡ್ಲಿ ವಿಚಾರಣೆ ನಡೆಸಿ ನಂತರ ಹಸ್ತಾಂತರದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದೆ.

ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಾದ ಬಳಿಕ ಶಂಕಿತ ಭಯೋತ್ಪಾದಕ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂದು ಅಮೆರಿಕಕ್ಕೆ ಭಾರತ ಮನವಿ ಮಾಡಿದೆ.

49ರ ಹರೆಯದ ಪಾಕಿಸ್ತಾನಿ ಸಂಜಾತ ಅಮೆರಿಕ ಪ್ರಜೆ ಹೆಡ್ಲಿಯನ್ನು ಅಮೆರಿಕ ಅಕ್ಟೋಬರ್‌ನಲ್ಲಿ ಬಂಧಿಸಿತ್ತು. ಮುಂಬೈದಾಳಿಗೆ ಸ್ಥಳಗಳನ್ನು ಗುರುತಿಸಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿತ್ತು. ಈತನ ಸಹಚರ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ರಾಣಾನನ್ನು ಕೂಡ ಎಫ್‌ಬಿಐ ಬಂಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ