ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯನಿಗೆ ಹಲ್ಲೆ: ಆಸ್ಟ್ರೇಲಿಯನ್‌ಗೆ 3ತಿಂಗಳು ಜೈಲು ಶಿಕ್ಷೆ (Indian taxi driver | Melbourne | Assaulat | Melbourne)
Bookmark and Share Feedback Print
 
ಆಸ್ಟ್ರೇಲಿಯಾದ ವಿಕ್ಟೋರಿಯನ್ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಕುಡಿತ ಮತ್ತಿನಲ್ಲಿ ಭಾರತೀಯ ಟ್ಯಾಕ್ಸಿ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆಸ್ಟ್ರೇಲಿಯಾ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ 3ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಇಂದು ಬೆಳಿಗ್ಗೆ ಭಾರತೀಯ ಟ್ಯಾಕ್ಸಿ ಚಾಲಕನೊಬ್ಬನಿಗೆ ಬೈದು ಹೊಡೆದು ಕೊಲೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಪಶ್ಚಿಮ ವಿಕ್ಟೋರಿಯಾ ನಗರದ ಬಲ್ಲಾರಟ್ ಪ್ರದೇಶದ ನಿವಾಸಿ ಪೌಲ್ ಜಾನ್ ಬ್ರೋಗ್ಡೆನ್(48)ಎಂಬಾತನನ್ನು ಬಂಧಿಸಲಾಗಿತ್ತು. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 3ತಿಂಗಳ ಕಾಲಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಭಾರತೀಯ ಟ್ಯಾಕ್ಸಿ ಚಾಲಕ ಸತೀಶ್ ಥಾಟಿಪಾಮುಲಾ(24)ನ ಮೇಲೆ ಆಸ್ಟ್ರೇಲಿಯಾದ ಪೌಲ್ ಜಾನ್ ಹಲ್ಲೆ ನಡೆಸಿ, ಟ್ಯಾಕ್ಸಿಯನ್ನು ಜಖಂಗೊಳಿಸಿದ್ದ. ಟ್ಯಾಕ್ಸಿ ಚಾಲಕ ತನ್ನನ್ನು ತಪ್ಪು ದಾರಿಯಲ್ಲಿ ಕರೆದೊಯ್ದಿರುವುದಾಗಿ ಆರೋಪಿಸಿ ಆತ ಹಲ್ಲೆ ನಡೆಸಿರುವುದಾಗಿ ಹೇಳಿದ್ದ.

'ನೀನು ನನ್ನನ್ನು ತಲುಪಿಸಿದ ನಂತರ ನಿನ್ನ ಕೊಂದು ಬಿಡುವೆ, ನೀನೊಬ್ಬ...ಇಂಡಿಯನ್ ಬಾಸ್ಟರ್ಡ್...ಎಂಬುದಾಗಿ ಅವಾಚ್ಯ ಶಬ್ದಗಳಿಂದ' ಪೌಲ್ ಜಾನ್ ನಿಂದಿಸಿ ಟ್ಯಾಕ್ಸಿ ಚಾಲಕ ಸತೀಶ್‌ನ ಮೇಲೆ ಹಲ್ಲೆ ನಡೆಸಿದ್ದ.

ತನ್ನ ಕಕ್ಷಿದಾರ ಕುಡಿದ ಮತ್ತಿನಲ್ಲಿ ಏನು ಮಾತಾಡಿದ್ದಾನೆಂದು ಆತನಿಗೆ ತಿಳಿದಿಲ್ಲ ಎಂದು ಜಾನ್ ಪರ ವಕೀಲ ಫಿಲಿಪ್ ಲೈಂಚ್ ವಿವರಿಸಿದ್ದಾನೆ. ಆದರೆ ಆರೋಪಿತನಿಗೆ ನ್ಯಾಯಾಧೀಶೆ ಮಿಶೆಲ್ ಹೂಡ್ಗ್‌ಸನ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ