ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೂಕಂಪಕ್ಕೆ ನಲುಗಿದ ಹೈಟಿ: 30ದೇಶಗಳಿಂದ ನೆರವು (earthquake | Haiti | Washington | India)
Bookmark and Share Feedback Print
 
ಕಳೆದ ಎರಡು ಶತಮಾನಗಳಲ್ಲೇ ಭೀಕರ ಎನ್ನಬಹುದಾದ ಭೂಕಂಪಕ್ಕೆ ಕೆರೆಬಿಯನ್ ದ್ವೀಪರಾಷ್ಟ್ರದ ಹೈಟಿ ನಗರ ತತ್ತರಿಸಿ ಹೋಗಿದ್ದು,ಪುನರ್ವಸತಿ ಹಾಗೂ ರಕ್ಷಣಾ ಕಾರ್ಯಕ್ಕಾಗಿ ಭಾರತ ಸೇರಿದಂತೆ 30ದೇಶಗಳು ನೆರವಿನ ಹಸ್ತ ನೀಡಿವೆ.

ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆ 7.03ರಷ್ಟಿತ್ತು. ಈ ಮಹಾವಿಪತ್ತಿನಲ್ಲಿ 50ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸರಿಯಾದ ವ್ಯವಸ್ಥೆ ಇಲ್ಲದೆ ಲಕ್ಷಾಂತರ ಮಂದಿ ಪರದಾಡುವಂತಾಗಿರುವುದಾಗಿ ಇಲ್ಲಿನ ನಿರಾಶ್ರಿತರು ದೂರಿದ್ದಾರೆ.

ಪ್ರಿನ್ಸ್‌ನಲ್ಲಿನ 12ಲಕ್ಷ ಜನರು ಭೂಕಂಪದ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿಗೊಂಡಿದೆ.

ಭೂಕಂಪದಿಂದ ತತ್ತರಿಸಿರುವ ಹೈಟಿಗೆ ನೆರವು ನೀಡುವ ನಿಟ್ಟಿನಲ್ಲಿ ಸುಮಾರು 30ದೇಶಗಳು ಮುಂದಾಗಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಪಿ.ಜೆ.ಕ್ರೌಲೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ