ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಕೀಮುಲ್ಲಾ ಮೆಹ್ಸೂದ್ ಗಾಯಗೊಂಡಿದ್ದು ಹೌದು, ಸತ್ತಿಲ್ಲ: ತಾಲಿಬಾನ್ (Taliban | Hakimullah Mehsud | Tehreek-e-Taliban Pakistan | US drone attack)
Bookmark and Share Feedback Print
 
ದಕ್ಷಿಣ ವಜಿರಿಸ್ತಾನದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರ ಮೇಲೆ ಅಮೆರಿಕಾ ನಡೆಸಿರುವ ಡ್ರೋನ್ ದಾಳಿಯಲ್ಲಿ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್ ಮುಖ್ಯಸ್ಥ ಹಕೀಮುಲ್ಲಾ ಮೆಹ್ಸೂದ್ ಗಾಯಗೊಂಡಿರುವುದು ಹೌದು, ಆದರೆ ಸತ್ತಿಲ್ಲ ಎಂದು ಉಗ್ರಗಾಮಿ ಸಂಘಟನೆ ಸ್ಪಷ್ಟಪಡಿಸಿದೆ.
hakimullah mehsud
PR


ಮೆಹ್ಸೂದ್ ಇಲ್ಲಿನ ಶಕ್ತೋಯ್ ಗ್ರಾಮದ ಮನೆಯೊಂದರಲ್ಲಿ ವಿದೇಶಿ ಉಗ್ರರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಮೆರಿಕಾ ಡ್ರೋನ್ ದಾಳಿ ನಡೆಸಿತ್ತು ಎಂದು ತಾಲಿಬಾನ್ ಮತ್ತು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆಂದು ಖಾಸಗಿ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ದಾಳಿಯಿಂದಾಗಿ ಇಬ್ಬರು ವಿದೇಶಿ ಭಯೋತ್ಪಾದಕರು, ಎಂಟು ಸ್ಥಳೀಯ ಹೋರಾಟಗಾರರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಮೆಹ್ಸೂದ್ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮೆಹ್ಸೂದ್ ತಲೆಗೆ ಗಾಯವಾಗಿದ್ದು, ಗುಪ್ತ ಸ್ಥಳವೊಂದರಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯ ಪರಿಸ್ಥಿತಿ ಅಪಾಯದಿಂದ ಮುಕ್ತವಾಗಿದೆ ಎಂದು ಆನ್‌ಲೈನ್ ಸುದ್ದಿ ಸಂಸ್ಥೆಯೊಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ದಾಳಿಯಿಂದಾಗಿ ಮೆಹ್ಸೂದ್‌ಗೆ ಸೇರಿದ್ದ ವಾಹನವೊಂದು ಸಂಪೂರ್ಣ ಧ್ವಂಸಗೊಂಡಿದೆ.

ಈ ನಡುವೆ ಮೆಹ್ಸೂದ್ ನೀಡಿರುವ ರೇಡಿಯೋ ಹೇಳಿಕೆಯೊಂದು ಆತ ಬದುಕಿರುವುದನ್ನು ತೋರಿಸುತ್ತಿದೆ ಎನ್ನಲಾಗುತ್ತಿದ್ದು, ಮತ್ತಷ್ಟು ದಾಳಿಗಳನ್ನು ನಡೆಸುವ ಬೆದರಿಕೆಯನ್ನು ಹಾಕಿದ್ದಾನೆ. ಅಲ್ಲದೆ ಅಮೆರಿಕಾದೊಂದಿಗೆ ಸೇರಿಕೊಂಡು ಪಾಕಿಸ್ತಾನ ತನ್ನದೇ ನೆಲದ ಅಮಾಯಕ ಬುಡಕಟ್ಟು ಜನಾಂಗದವರನ್ನು ನಾಶ ಮಾಡುತ್ತಿದೆ. ಇದಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಆತ ಗುಟುರು ಹಾಕಿದ್ದಾನೆ.

ಶುಕ್ರವಾರ ಮುಂಜಾನೆ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಮಾತನಾಡುತ್ತಾ, ಮೆಹ್ಸೂದ್ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬುದರ ಕುರಿತು ಯಾವುದೇ ಖಚಿತತೆಗಳಿಲ್ಲ ಎಂದಿದ್ದರು.

ಅಮೆರಿಕಾ ಡ್ರೋನ್ ದಾಳಿಯಲ್ಲಿ ಸತ್ತವರಲ್ಲಿ ಹಕೀಮುಲ್ಲಾ ಮೆಹ್ಸೂದ್ ಸೇರಿದ್ದಾನೋ, ಇಲ್ಲವೋ ಅಥವಾ ಅವನಂತೆ ತದ್ರೂಪು ಹೊಂದಿರುವ ಬೇರೆ ಯಾರಾದರೂ ಕೊಲ್ಲಲ್ಪಟ್ಟಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಪಾಕ್ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ಅಮೆರಿಕಾ ಡ್ರೋನ್ ದಾಳಿಗೆ ಬಲಿಯಾದ ನಂತರ ಆತನ ಸಹೋದರ ಎನ್ನಲಾದ ಹಕೀಮುಲ್ಲಾ ಮೆಹ್ಸೂದ್‌ನನ್ನು ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ