ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸೀಸ್‌ನಲ್ಲಿ 3ಭಾರತೀಯರಿಗೆ ಬಾರ್ ಪ್ರವೇಶಕ್ಕೆ ನಿರಾಕರಣೆ (Australia bar | Indians | racism | Melbourne)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದ್ದರೆ, ಮತ್ತೊಂದೆಡೆ ಮೆಲ್ಬೊರ್ನ್‌ನ ಬಾರ್‌ವೊಂದಕ್ಕೆ ತೆರಳಿದ ಮೂರು ಮಂದಿ ಭಾರತೀಯರಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.

'ನಾವು ನಮ್ಮ ಗೆಳೆಯರೊಡನೆ ಅಭಿಷೇಕ್ ಅಗರ್‌ವಾಲ್ ಅವರ ಬೀಳ್ಕೊಡುಗೆ ಸಮಾರಂಭಕ್ಕಾಗಿ ಬಾರ್‌ಗೆ ತೆರಳಿರುವುದಾಗಿ ತಿಳಿಸಿದ್ದು, ಅದರಲ್ಲಿ ಭಾರತೀಯರಾದ ನಮಗೆ ಒಳಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು' ಎಂದು ಗುಂಪಿನ ನೇಪಾಳಿ ಪ್ರಜೆ ಸುಜಾನ್ ಪಾಠಕ್ ವಿವರಿಸಿದ್ದಾರೆ.

ಯಾವುದೇ ವಿವರಣೆ ನೀಡದೆ ಮೆಲ್ಬೊರ್ನ್ ಸೆಂಟರ್ ಲಯನ್ ಹೋಟೆಲ್ ಬಾರ್‌ನಲ್ಲಿ ಆರು ಮಂದಿ ಗುಂಪಿನಲ್ಲಿ, ಮೂರು ಭಾರತೀಯರಿಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆರು ಮಂದಿಯಲ್ಲಿ ಮೂರು ಮಂದಿ ಭಾರತೀಯರು ಹಾಗೂ ಮೂರು ಮಂದಿ ನೇಪಾಳಿಯರಿದ್ದರು. ಯಾವ ಕಾರಣಕ್ಕಾಗಿ ನಮಗೆ ಪ್ರವೇಶ ನಿರಾಕರಿಸಲಾಯಿತು ಎಂದು ಪೊಲೀಸರ ಸಹಾಯ ಕೇಳಿದರು ಕೂಡ ಅವರು ಯಾವುದೇ ನೆರವು ನೀಡದೆ ಕೈಚೆಲ್ಲಿರುವುದಾಗಿ ಪಾಠಕ್ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಪರ್ಯಾಸವೆಂದರೆ ಆಸೀಸ್‌ನಲ್ಲಿರುವ ಎಲ್ಲಾ ಬಾರ್‌ನ ಹೊರಭಾಗದಲ್ಲಿ, ಯಾವುದೇ ವಿವರಣೆ ನೀಡದೆ ಯಾವ ಗ್ರಾಹಕನನ್ನೂ ಹೊರಗೆ ಕಳುಹಿಸುವಂತಿಲ್ಲ ಎಂದು ನೋಟಿಸ್ ಬೋರ್ಡ್ ಕೂಡ ಹಾಕಿರುತ್ತಾರೆ. ಆದರೆ ಬಾರ್‌ನೊಳಗೆ ಹೋಗಲು ನಾವು ಪ್ರಯತ್ನ ಪಟ್ಟೆವು. ಬಾರ್ ಒಳಗೆ ಹೋಗಲು ಲೈನ್‌ನಲ್ಲಿ ತುಂಬಾ ಮಂದಿ ನಿಂತಿದ್ದರು. ಆದರೆ ನಮಗೆ ಮಾತ್ರ ಪ್ರವೇಶ ನಿರಾಕರಿಸಿದ್ದರು ಎಂದು ಶುಕ್ರವಾರ ತಡರಾತ್ರಿ ಅಗರ್‌ವಾಲ್ ಘಟನೆ ಕುರಿತು ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಜನಾಂಗೀಯವಾಗಿ ಹಲ್ಲೆ, ಹತ್ಯೆ ಮಾಡುವಂತಹ ಘಟನೆಯ ನಡುವೆಯೇ, ಇದೀಗ ಬಾರ್ ಪ್ರವೇಶಕ್ಕೂ ನಿರಾಕರಿಸುವ ಮೂಲಕ ಆಸ್ಟ್ರೇಲಿಯಾದಲ್ಲಿ ಭಾರತೀಯರನ್ನು ಅವಮಾನಿಸುವ ಘಟನೆ ಮುಂದುವರಿದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ