ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಲಕಿಯ ಅತ್ಯಾಚಾರಗೈದ ಪಾಪಿಗೆ 32 ವರ್ಷ ಜೈಲು (Singapore | child rape | jail | Straits Times)
Bookmark and Share Feedback Print
 
ಏಳು ವರ್ಷಗಳಿಗೂ ಹೆಚ್ಚು ಕಾಲ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನಿಗೆ ಸಿಂಗಾಪುರ ನ್ಯಾಯಾಲಯ 32 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಬಲಿಪಶುವಿನ ಗುರುತನ್ನು ಮರೆ ಮಾಚುವ ಉದ್ದೇಶದಿಂದ ಈ 60ರ ಹರೆಯದ ಪಾಪಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಆತ ಆ ಬಾಲಕಿಯ ತಂದೆಗೆ ಆಧ್ಯಾತ್ಮಿಕ ಸಲಹೆಗಾರನಾಗಿದ್ದ ಮತ್ತು ಕುಟುಂಬಕ್ಕೆ ತೀರಾ ಆಪ್ತನಾಗಿದ್ದ ಎಂದು ತಿಳಿಸಲಾಗಿದೆ.

ನಾಲ್ಕು ಮಕ್ಕಳ ತಂದೆಯಾಗಿರುವ ಈತನಿಗೆ ಕಳೆದ ವರ್ಷವೇ 24 ವರ್ಷಗಳ ಸಜೆಯನ್ನು ನ್ಯಾಯಾಲಯ ಪ್ರಕಟಿಸಿತ್ತು. ಆದರೆ ಈ ಶಿಕ್ಷೆಯು ಅಸಮರ್ಪಕ, ಇನ್ನೂ ಹೆಚ್ಚು ಪ್ರಮಾಣದಲ್ಲಿ ಸಜೆ ನೀಡಬೇಕು ಎಂದು ಮತ್ತೆ ಮೇಲ್ಮನವಿ ಸಲ್ಲಿಸಿದ ಕಾರಣ ಎಂಟು ವರ್ಷಗಳ ಕಾಲ ವಿಸ್ತರಿಸಲಾಗಿದೆ ಎಂದು ಇಲ್ಲಿನ 'ಸ್ಟ್ರೈಟ್ಸ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.

ವ್ಯಕ್ತಿ ಇತಿಹಾಸದಲ್ಲೇ ದಾಖಲಾಗಿರುವ ಅತಿ ಹೇಯ ಲೈಂಗಿಕ ಕಿರುಕುಳಗಳಲ್ಲಿ ಈ ವ್ಯಕ್ತಿಯ ಅಪರಾಧವೂ ಒಂದು ಎಂದು ಫಿರ್ಯಾದಿಗಳು ಯಶಸ್ವಿಯಾಗಿ ತಮ್ಮ ವಾದ ಮಂಡಿಸಿದ್ದರು.

ಬಾಲಕಿಯ ಹೆತ್ತವರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿದ್ದ ಆತ ತಡರಾತ್ರಿಯವರೆಗೆ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡು ಆಕೆ ಎಂಟು ವರ್ಷದವಳಾಗಿದ್ದಾಗಲೇ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಆದರೆ ಇದು ಬಹಿರಂಗವಾದದ್ದು 2008ರ ಬೇಸಿಗೆಯಲ್ಲಿ. ತನ್ನ ಚಿಕ್ಕಮ್ಮಳಿಗೆ ಬಾಲಕಿ ತನಗೆ ನೀಡಲಾಗುತ್ತಿರುವ ಕಿರುಕುಳವನ್ನು ತಿಳಿಸಿದ್ದಳು.

ಅಮಾಯಕ ಮತ್ತು ತೀರಾ ಪುಟ್ಟ ಬಾಲಕಿಯ ಮೇಲೆ ಕ್ರೂರ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಹೆಚ್ಚಿಸಲಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ