ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ ಭೂಕಂಪ:ಒಂದೆಡೆ ನೋವು-ಮತ್ತೊಂದೆಡೆ ಲೂಟಿಕೋರರು! (Western Hemisphere | Haiti | Earthquake | Port-au-Prince)
Bookmark and Share Feedback Print
 
PTI
ಭೀಕರ ಭೂಕಂಪದಿಂದಾಗಿ ಹೈಟಿಯಲ್ಲಿ ಬದುಕುಳಿದಿರುವ ನಿವಾಸಿಗಳು ಅಳಿದುಳಿದ ಅವಶೇಷಗಳ ನಡುವೆ ಬದುಕಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಲೂಟಿಕೋರರ ಗುಂಪು ಹಣ, ಚಿನ್ನವನ್ನು ದೋಚುವಲ್ಲಿ ನಿರತರಾಗುವ ಮೂಲಕ ಹೈಟಿಗರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕುವಂತಾಗಿದೆ.

ಭೂಕಂಪ ಸಂಭವಿಸಿದ ಮೂರು ದಿನಗಳ ನಂತರ ಬದುಕುಳಿದ ನಿವಾಸಿಗಳನ್ನು ಲೂಟಿ ಮಾಡುವ ಗುಂಪು ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ರಸ್ತೆ ಮತ್ತು ಕ್ಯಾಂಪ್‌ಗಳಲ್ಲಿ ಆಶ್ರಯ ಪಡೆದಿರುವವರ ಮೇಲೆ ದರೋಡೆಕೋರರ ಗುಂಪು ಈ ಲೂಟಿ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹೈಟಿ ನಗರಕ್ಕೆ ಬಡಿದಪ್ಪಳಿಸಿದ ಭೀಕರ ಭೂಕಂಪಕ್ಕೆ ಸುಮಾರು 2ಲಕ್ಷ ಮಂದಿ ಬಲಿಯಾಗಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ 50ಸಾವಿರ ಮೃತದೇಹಗಳನ್ನು ಕಟ್ಟಡಗಳ ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ. ಒಟ್ಟಾರೆ ಒಂದರಿಂದ ಎರಡು ಲಕ್ಷ ಜನರು ಸಾವಿಗೀಡಾಗಿದ್ದಾರೆ. ಆದರೆ ಸಾವನ್ನಪ್ಪಿದವರ ಸಂಖ್ಯೆ ಈವರೆಗೂ ನಿಖರವಾಗಿ ತಿಳಿದಿಲ್ಲ ಎಂದು ಆಂತರಿಕ ಸಚಿವ ಆಂಟೋನೆ ಬಿಯೆನ್ ಸುದ್ದಿಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.

ಅಂದಾಜು 40ಸಾವಿರ ಜನರು ಅವಶೇಷಗಳಡಿಯಲ್ಲೇ ಸಮಾಧಿಯಾಗಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಅರ್ಮಿಕ್ ಲೂಯಿಸ್ ತಿಳಿಸಿದ್ದಾರೆ. ಗುರುವಾರ ಸಂಭವಿಸಿದ 7.0ರಷ್ಟು ಪ್ರಮಾಣದ ಭಾರೀ ಭೂಕಂಪಕ್ಕೆ ಹೈಟಿ ನಗರ ಸಂಪೂರ್ಣ ತತ್ತರವಾಗಿ ಹೋಗಿದೆ.
ಸಂಬಂಧಿತ ಮಾಹಿತಿ ಹುಡುಕಿ