ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೋಮಾಲಿಯ: ರೇಡಿಯೊ ಕೇಂದ್ರಗಳ ಮೇಲೆ ದಾಳಿ (journalist | Somalia | Radio stations | Violence)
Bookmark and Share Feedback Print
 
ಸೋಮಾಲಿಯಾದ ಮೂರು ಖಾಸಗಿ ರೇಡಿಯೊ ಕೇಂದ್ರಗಳ ಮೇಲೆ ಅಪರಿಚಿತ ಗುಂಪೊಂದು ಕೈಬಾಂಬ್ ಎಸೆದು ದಾಳಿ ನಡೆಸಿದ ಪರಿಣಾಮ ಮೂರು ಪತ್ರಕರ್ತರು ಹಾಗೂ ಒಬ್ಬ ರಕ್ಷಣಾ ಗಾರ್ಡ್ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗಾಲ್‌ಕೈಯೋ ರೇಡಿಯೋ, ಮುಡುಗ್ ಹಾಗೂ ಹೋಬೈಯೋ ರೇಡಿಯೋ ಕೇಂದ್ರಗಳ ಮೇಲೆ ಶುಕ್ರವಾರ ಸಂಜೆ ಏಕಾಏಕಿ ಕೈ ಬಾಂಬ್ ಎಸೆದು ದಾಳಿ ನಡೆಸಿದ್ದಾರೆ. ನೂರಾರು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಪುಂಟ್‌ಲ್ಯಾಂಡ್ ಪೊಲೀಸ್ ಅಧಿಕಾರಿ ಕರ್ನಲ್ ಅಬ್ದುಲ್ಲಾಹಿ ವೆಲಿ ಹೇಳಿದ್ದಾರೆ.

ಮೂರು ರೇಡಿಯೊ ಕೇಂದ್ರಗಳ ಮೇಲೆ ನಡೆದ ದಾಳಿ ಘಟನೆ ಕುರಿತಂತೆ ತನಿಖೆ ನಡೆಸುತ್ತಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಕಚೇರಿಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ನಡೆದ ದಾಳಿಯಿಂದಾಗಿ ಆಘಾತಕ್ಕೆ ಒಳಗಾಗಿದ್ದೇನೆ ಎಂದು ಘಟನೆಯಲ್ಲಿ ಗಾಯಗೊಂಡ ಪತ್ರಕರ್ತ ಅಬ್ದುಲ್ ಕಾದಿರ್ ಅಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋಮಾಲಿಯ, ರೇಡಿಯೊ, ಮೊಗದಿಶು, ದಾಳಿ