ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ ಭೂಕಂಪ ಬಲಿ ಸಂಖ್ಯೆ 2 ಲಕ್ಷಕ್ಕೆ ತಲುಪಬಹುದು (Paul Antoine Bien-Aime | Haiti earthquake | Death toll | Port-au-Prince)
Bookmark and Share Feedback Print
 
ಮಂಗಳವಾರ ಸಂಭವಿಸಿದ ಭೀಕರ ಭೂಕಂಪಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2,00,000ಕ್ಕೆ ತಲುಪಬಹುದು ಎಂದು ಹೈಟಿ ಆಂತರಿಕ ಸಚಿವ ಪೌಲ್ ಅಂತೋನಿ ಬಿನ್ ಏಮ್ ತಿಳಿಸಿದ್ದಾರೆ.

ಈಗಾಗಲೇ ನಾವು 50,000ಕ್ಕೂ ಹೆಚ್ಚು ಮೃತ ದೇಹಗಳನ್ನು ಪತ್ತೆ ಮಾಡಿದ್ದೇವೆ. ಸತ್ತವರ ಅಂದಾಜು ಸಂಖ್ಯೆ ಒಂದು ಲಕ್ಷದಿಂದ ಎರಡು ಲಕ್ಷದೊಳಗಿರಬಹುದು. ಆದರೆ ಈಗಲೇ ಖಚಿತವಾಗಿ ಹೇಳಲಾಗದು ಎಂದು ಅವರು ತಿಳಿಸಿದ್ದಾರೆ.

50,000 ಮಂದಿ ಸತ್ತಿದ್ದಾರೆ ಎಂಬ ಖಚಿತ ಹೇಳಿಕೆಯನ್ನು ಹೈಟಿಯ ಸಾರ್ವಜನಿಕ ಆರೋಗ್ಯ ಸಚಿವ ಅಲೆಕ್ಸ್ ಲಾರ್ಸನ್ ಕೂಡ ನೀಡಿದ್ದಾರೆ. ಅವರ ಪ್ರಕಾರ ಈ ವಾರ ನಡೆದ ಭೂಕಂಪದಲ್ಲಿ 2,50,000 ಲಕ್ಷ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಸುಮಾರು 15 ಲಕ್ಷ ಮಂದಿ ಮನೆ-ಮಠ ಕಳೆದುಕೊಂಡಿದ್ದಾರೆ.

ಈ ನಡುವೆ ಸರಕಾರಿ ಪ್ರಧಾನ ಕಚೇರಿಯನ್ನು ರಾಷ್ಟ್ರ ರಾಜಧಾನಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಪೊಲೀಸ್ ಠಾಣೆಯೊಂದಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿಯ ಎಲ್ಲಾ ಕ್ರೀಡಾ ಕೇಂದ್ರಗಳನ್ನೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಲಾರ್ಸೆನ್ ತಿಳಿಸಿದ್ದಾರೆ.

ಅಧ್ಯಕ್ಷರ ಕಚೇರಿ, ರಾಷ್ಟ್ರೀಯ ಸಂಸತ್ತು ಮತ್ತು ಇಲ್ಲಿನ ಪ್ರಮುಖ ಜೈಲು ಕೂಡ ಭೂಕಂಪಕ್ಕೆ ಕುಸಿದು ಬಿದ್ದಿವೆ. ನಗರದ ಬಹುತೇಕ ಆಸ್ಪತ್ರೆಗಳು ಧರಾಶಾಯಿಯಾಗಿವೆ.

ಈಗಾಗಲೇ ಸುಮಾರು 15,000 ಮಂದಿಯ ಶವಗಳನ್ನು ಸಂಗ್ರಹಿಸಿ, ದಫನ ಮಾಡಲಾಗಿದೆ ಎಂದು ಹೈಟಿ ಪ್ರಧಾನಿ ಜೀನ್ ಮ್ಯಾಕ್ಸ್ ಬೆಲ್ಲೆರೆವ್ ತಿಳಿಸಿದ್ದಾರೆ.

ಈಗ ಪತ್ತೆ ಮಾಡಿರುವುದು ಕೇವಲ ಪ್ರಮುಖ ರಸ್ತೆಗಳಲ್ಲಿನ ಶವಗಳನ್ನು ಮಾತ್ರ. ಒಳ ಬೀದಿಗಳ ಅವಶೇಷಗಳಡಿಯಲ್ಲಿ ಹುದುಗಿರಬಹುದಾದ ಮೃತದೇಹಗಳನ್ನು ಇನ್ನೂ ಹೊರ ತೆಗೆದಿಲ್ಲ. ಅದನ್ನೆಲ್ಲ ಹೊರ ತೆಗೆದ ಮೇಲಷ್ಟೇ ಸಂಪೂರ್ಣ ಲೆಕ್ಕಾಚಾರ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಆದರೆ ರೆಡ್ ಕ್ರಾಸ್ ಅಧಿಕಾರಿಗಳ ಅಂದಾಜಿನ ಪ್ರಕಾರ ಮಂಗಳವಾರ ಸಂಭವಿಸಿದ 7.0 ರಿಕ್ಟರ್ ಮಾಪನದಲ್ಲಿ ತೋರಿಸಿದ ಭೂಕಂಪದಲ್ಲಿ 50,000 ಮಂದಿಯಷ್ಟೇ ಬಲಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ