ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾದಲ್ಲಿ ಮತ್ತೆ ಭಾರತೀಯನ ಮೇಲೆ ಹಲ್ಲೆ (Australia | Indians | Racist attacks | Melbourne)
Bookmark and Share Feedback Print
 
ಭಾರತದ ತೀವ್ರ ಆಕ್ಷೇಪದ ನಡುವೆಯೂ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿ ನಿರಂತರವಾಗಿ ಮುಂದುವರಿದಿದ್ದು, ಶುಕ್ರವಾರ ತಡರಾತ್ರಿ ಕೂಡ ಭಾರತೀಯ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪ್ರಯಾಣಿಕರ ಸೋಗಿನಲ್ಲಿ ಬಂದ ನಾಲ್ಕು ಮಂದಿ ಯುವಕರ ಗುಂಪೊಂದು ಭಾರತೀಯ ಮೂಲದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದೆ. ಆದರೆ ಇದೊಂದು ಅವಕಾಶವಾದಿಗಳ ಕೃತ್ಯ ಎಂದು ತಿಳಿಸಿರುವ ಆಸ್ಟ್ರೇಲಿಯಾ ಪೊಲೀಸರು, ಇದು ಜನಾಂಗೀಯ ದಾಳಿ ಅಲ್ಲ ಎಂದು ತಿಳಿಸಿದ್ದಾರೆ.

ವಿಕ್ಟೋರಿಯನ್ ನಗರದ ಬಲ್ಲಾರಟ್‌ನಲ್ಲಿ ಆಸ್ಟ್ರೇಲಿಯಾದ ನಾಲ್ಕು ಮಂದಿ ಪ್ರಯಾಣಿಕರು 25ರ ಹರೆಯದ ಭಾರತೀಯ ಚಾಲಕನ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕೆಲವು ದಿನಗಳಿಂದ ಭಾರತೀಯರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರು ಕೂಡ ಆಸ್ಟ್ರೇಲಿಯ ಇದು ಜನಾಂಗೀಯ ದಾಳಿ ಅಲ್ಲ ಎಂದು ರಾಗ ಎಳೆಯುತ್ತಿದೆ.

ಸುಮಾರು 16ರಿಂದ 18ರ ವಯೋಮಾನದ ಯುವಕರು ಈ ಕೃತ್ಯ ನಡೆಸಿದ್ದು, ಇದು ಅವಕಾಶವಾದಿಗಳ ಕೃತ್ಯವೇ ವಿನಃ ಜನಾಂಗೀಯ ದಾಳಿ ಅಲ್ಲ ಎಂದು ಮೆಲ್ಬೊರ್ನ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ