ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಉಗ್ರಗಾಮಿಗಳ ತಾಣ:ನಿರುಪಮಾ (Pakistan | Terrorism | Nirupama Rao)
Bookmark and Share Feedback Print
 
ಕಾಶ್ಮಿರದಲ್ಲಿ ಇತ್ತೀಚೆಗೆ ನಡೆದ ಎರಡು ಆತ್ಮಾಹುತಿ ದಾಳಿಯಿಂದಾಗಿ ಭಯೋತ್ಪಾದಕ ಶಿಬಿರಗಳು ಇನ್ನೂ ಪಾಕಿಸ್ತಾನದಲ್ಲಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹೇಳಿದ್ದಾರೆ.

ಭಾರತ ಕಳವಳದಿಂದ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಭಾರತದ ವಿರುದ್ಧ ಪಾಕಿಸ್ತಾನ ಉಗ್ರಗಾಮಿ ಚಟುವಟಿಕೆ ಹಾಗೂ ಹಿಂಸಾಚಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ನಿರುಪಮಾ ರಾವ್ ಆರೋಪಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಭಾರತದ ಗಡಿಯೊಳಗೆ ಉಗ್ರರು ನುಸಳುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು, ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುವುದನ್ನು ಮುಂದುವರಿಸಿದೆ ಎನ್ನುವುದನ್ನು ತಳ್ಳಿಹಾಕಲಾಗದು. ಭಾರತದ ವಿರುದ್ಧ ಉಗ್ರರನ್ನು ಪಾಕ್ ಪ್ರಚೋದಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಾಶ್ಮಿರವನ್ನು ಸ್ವತಂತ್ರಗೊಳಿಸಲು ಸಾವಿರ ವರ್ಷಗಳ ಹೋರಾಟಕ್ಕೆ ಸಿದ್ಧರಾಗಿ ಎನ್ನುವ ಜುಲ್ಫಿಕರ್ ಅಲಿ ಭುಟ್ಟೋ ಅವರ ಹೇಳಿಕೆಯನ್ನು ಬಹಿರಂಗಪಡಿಸಿದ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರ ಹೇಳಿಕೆಯನ್ನು ಉಲ್ಲೇಖಿಸಿದ ನಿರುಪಮಾರಾವ್ ಹಿಂಸಾಚಾರದಿಂದ ಯಾವುದನ್ನು ಸಾಧಿಸಲಾಗದು ಎನ್ನುವ ಅಂಶವನ್ನು ಪಾಕ್‌ ತಿಳಿದಲ್ಲಿ ಉತ್ತಮ ಎಂದು ವ್ಯಂಗವಾಗಿ ನುಡಿದರು
ಸಂಬಂಧಿತ ಮಾಹಿತಿ ಹುಡುಕಿ