ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ನಿಗ್ರಹಕ್ಕೆ ಪಾಕ್, ಅಪ್ಘನ್, ಇರಾನ್ ನಿರ್ಧಾರ (Pakistan | Afghanistan | Terrorism)
Bookmark and Share Feedback Print
 
ಮಾದಕ ವಸ್ತು ಸಾಗಾಣೆ, ಪ್ರತ್ಯೇಕತವಾದ ಬಾಗೂ ಭಯೋತ್ಪಾದನೆ ನಿಗ್ರಹಕ್ಕಾಗಿ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ರಾಷ್ಟ್ರಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಮತ್ತು ಇರಾನ್ ಹಾಗೂ ಅಫ್ಘಾನ್ ದೇಶಗಳ ವಿದೇಶಾಂಗ ಸಚಿವರಾದ ಮನೊಚೆಹರ್ ಮೊಟ್ಟಾಕಿ ಮತ್ತು ರಂಗೀನ್ ದಾದ್‌ಫಾರ್ ಸ್ಪಂತಾ, ಜಂಟಿ ಒಪ್ಪಂದಕ್ಕೆ ಸಹಿಹಾಕಿದರು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ವಿದೇಶಾಂಗ ಸಚಿವ ಖುರೇಶಿ ಮಾತನಾಡಿ, ಸರಣಿ ಸಭೆಗಳನ್ನು ನಡೆಸುವ ಮೂಲಕ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದನೆ ನಿಗ್ರಹಕ್ಕಾಗಿ ಜಂಟಿ ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿದ್ದಾರೆ.

ಮಾದಕ ವಸ್ತುಗಳ ಸಾಗಾಣೆ ಗಡಿರೇಖಗಳಲ್ಲಿರುವ ಅನಧಿಕೃತ ಶಸ್ತ್ರಾಸ್ತ್ರ ಸಾಗಣೆಯನ್ನು ತಡೆಯುವ ಮೂಲಕ ವಿಚ್ಚಿದ್ರಕಾರಿ ಶಕ್ತಿಗಳನ್ನು ಸದೆಬಡೆಯಲು ಹಲವಾರು ತೀರ್ಮಾನಗಳನ್ನು ತೆಗೆದುಕೊಂಡಿರುವುದಾಗಿ ಸಚಿವ ಖುರೇಶಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ