ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಬೂಲ್‌: ತಾಲಿಬಾನ್ ಆತ್ಮಹತ್ಯಾ ಬಾಂಬ್ ದಾಳಿಗೆ 9 ಬಲಿ (Bomb blasts | Kabul | Aghanistan | presidential palace)
Bookmark and Share Feedback Print
 
ಸೆಂಟ್ರಲ್ ಕಾಬೂಲ್‌ನಲ್ಲಿ ಸೋಮವಾರ ಬೆಳಿಗ್ಗೆ ಅಧ್ಯಕ್ಷರ ಅರಮನೆ ಹಾಗೂ ಜನನಿಭಿಡ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ತಾಲಿಬಾನ್ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ನಾಲ್ಕು ಮಂದಿ ದಾಳಿಕೋರರು ಸೇರಿದಂತೆ ಒಂಬತ್ತು ಮಂದಿ ಬಲಿಯಾಗಿದ್ದು, 40ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಸುಮಾರು 3ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿತ್ತು. ಶಾಪಿಂಗ್ ಮಾಲ್ ಹಾಗೂ ಅಧ್ಯಕ್ಷರ ಅರಮನೆಯನ್ನು ಗುರಿಯಾಗಿರಿಸಿಕೊಂಡು ತಾಲಿಬಾನ್ ಉಗ್ರರು ಈ ದುಷ್ಕೃತ್ಯ ಎಸಗಿದ್ದರು.

ಅಧ್ಯಕ್ಷರ ಅರಮನೆ ಹಾಗೂ ಜನನಿಭಿಡ ಪ್ರದೇಶದಲ್ಲಿ ಏಕಾಏಕಿ ಆತ್ಮಹತ್ಯಾ ಬಾಂಬ್ ಹಾಗೂ ಗುಂಡಿನ ದಾಳಿಯಿಂದ ಜನರು ದಿಕ್ಕೆಟ್ಟು ಓಡಿ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬ ವಿವರಿಸಿದ್ದಾನೆ. ಕಳೆದ ವರ್ಷ ಅಕ್ಟೋಬರ್ 28ರ ನಂತರ ಉಗ್ರರು ನಡೆಸಿದ ದೊಡ್ಡ ದಾಳಿ ಇದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸೆಂಟ್ರಲ್ ಬ್ಯಾಂಕ್ ಸಮೀಪದ ಕಟ್ಟಡ ಹಾಗೂ ಅಧ್ಯಕ್ಷರ ಅರಮನೆಯಿಂದಲೂ ದಟ್ಟವಾದ ಹೊಗೆ ಏಳುತ್ತಿರುವುದನ್ನು ಕಂಡಿರುವುದಾಗಿಯೂ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬ ತಿಳಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ