ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೂಕಂಪದಿಂದ ತತ್ತರಗೊಂಡ 'ಹೈಟಿಯಲ್ಲಿ ಆರ್ತನಾದ' (Haiti | Port-au-Prince | earthquake | George W Bush,)
Bookmark and Share Feedback Print
 
ಭಾರೀ ಭೂಕಂಪದಿಂದ ತತ್ತರಿಸಿ ಹೋಗಿರುವ ಕೆರೆಬಿಯನ್ ದ್ವೀಪ ರಾಷ್ಟ್ರ ಹೈಟಿಯಲ್ಲಿ ಬದುಕುಳಿದವರ ರಕ್ಷಣಾ ಕಾರ್ಯ ಕಳೆದ ಆರು ದಿನಗಳಿಂದ ನಡೆಯುತ್ತಿದ್ದು, ಎಲ್ಲೆಡೆ ಹಾಹಾಕಾರ, ಸಹಾಯಕ್ಕಾಗಿ ಕೈಚಾಚುವವರ ಕೂಗು ಮುಗಿಲು ಮುಟ್ಟಿದೆ.

ವಿಶ್ವಸಂಸ್ಥೆ 15ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದರು ಕೂಡ ಆಹಾರ, ನೀರು, ವೈದ್ಯಕೀಯ ಸಹಾಯವಿಲ್ಲದೆ ನರಳುತ್ತಿರುವವರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ.

ರಾಜಧಾನಿಯ ಏಕೈಕ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೇನಾಪಡೆಯ 4,200 ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ವಿಮಾನ ಕೊಂಡೊಯ್ಯುವ ಹಡಗು ಹಾಗೂ 24ಹೆಲಿಕಾಪ್ಟರ್‌ಗಳು ಈಗಾಗಲೇ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ.

ಅಂತಾರಾಷ್ಟ್ರೀಯ ಸಮುದಾಯದಿಂದ ನೆರವಿನ ಮಹಾಪೂರ ಹರಿದು ಬಂದಿದ್ದರೂ ಅಸ್ತವ್ಯಸ್ತಗೊಂಡ ವಿಮಾನ ನಿಲ್ದಾಣ ಹಾಗೂ ಹದಗೆಟ್ಟ ರಸ್ತೆಯಿಂದಾಗಿ ಪರಿಹಾರ ಸಾಮಗ್ರಿಗಳನ್ನು ಸಕಾಲಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.

ಖಾಸಗಿ ದೇಣಿಗೆ ನೀಡುವಂತೆ ಜಾರ್ಜ್ ಡಬ್ಲ್ಯೂ ಬುಷ್ ಹಾಗೂ ಬಿಲ್ ಕ್ಲಿಂಟನ್ ಅವರನ್ನು ಕೋರಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಹುತೇಕ ನಾಶವಾಗಿರುವ ಹೈಟಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವುದು ಸವಾಲಿನ ಸಂಗತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ