ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಖಂಡ ಶ್ರೀಲಂಕಾದೊಳಗೆ ತಮಿಳರ ಸಮಸ್ಯೆಗಳಿಗೆ ಪರಿಹಾರ (Sri Lanka | Tamil National Alliance | New Democratic Front | Sarath Fonseka)
Bookmark and Share Feedback Print
 
ಎಲ್‌ಟಿಟಿಇ ಪರವಾಗಿದ್ದ ತಮಿಳು ರಾಷ್ಟ್ರೀಯ ಒಕ್ಕೂಟ ಪಕ್ಷವು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಲಿಟರಿ ಮಾಜಿ ಮುಖ್ಯಸ್ಥ ಸರತ್ ಫೊನ್ಸೇಕಾ ಅವರನ್ನು ಬೆಂಬಲಿಸುತ್ತಿದ್ದು, ಅಖಂಡ ಶ್ರೀಲಂಕಾವನ್ನು ಗುರಿಯಾಗಿಟ್ಟುಕೊಂಡು ಜನಾಂಗೀಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಪ್ರಯತ್ನ ನಡೆಸುವುದಾಗಿ ಹೇಳಿದೆ.

ಶ್ರೀಲಂಕಾವನ್ನು ವಿಭಜಿಸದೆ, ಅಖಂಡತೆಯನ್ನು ಉಳಿಸಿಕೊಂಡೇ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಗುರಿಯಿಟ್ಟುಕೊಂಡು ಮಾತುಕತೆ ನಡೆಸಲಾಗುತ್ತಿದೆ ಎಂದು ತಮಿಳು ರಾಷ್ಟ್ರೀಯ ಒಕ್ಕೂಟದ (ಟಿಎನ್ಎ) ಮುಖ್ಯಸ್ಥ ಆರ್. ಸಂಪಂಥನ್ ತಿಳಿಸಿದ್ದಾರೆ.

ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳಾದ ಮಹೀಂದ್ರಾ ರಾಜಪಕ್ಷೆ ಮತ್ತು ಫೊನ್ಸೇಕಾ ಅವರೊಂದಿಗೆ ನಾನು ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಶ್ರೀಲಂಕಾವನ್ನು ವಿಭಜಿಸುವ ಪ್ರಶ್ನೆಯಿಲ್ಲ. ನಾವು ರಾಜಕೀಯ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅವರು ವಿವರಣೆ ನೀಡಿದರು.

ತಮಿಳು ರಾಷ್ಟ್ರೀಯ ಒಕ್ಕೂಟದ ಫೆಡರಲ್ ಪಕ್ಷ ಇಲಂಕೈ ತಮಿಳ್ ಅರಸು ಕಚ್ಚಿ, ತಮಿಳು ಯುನೈಟೆಡ್ ಲಿಬರೇಷನ್ ಫ್ರಂಟ್ ಮತ್ತು ಇತರ ತಮಿಳು ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದು, ಅಖಂಡತೆಗೆ ಬೆಂಬಲ ಸೂಚಿಸಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಬರುವ ಜನವರಿ 26ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಅಧ್ಯಕ್ಷೀಯ ಅಭ್ಯರ್ಥಿ ಜನರಲ್ ಸರತ್ ಫೊನ್ಸೇಕಾ ಅವರನ್ನು ಬೆಂಬಲಿಸುತ್ತಿರುವುದಾಗಿ ತಮಿಳು ರಾಷ್ಟ್ರೀಯ ಒಕ್ಕೂಟವು ಇತ್ತೀಚೆಗಷ್ಟೇ ಪ್ರಕಟಿಸಿತ್ತು.

ಶ್ರೀಲಂಕಾದಲ್ಲಿರುವ ತಮಿಳು ಭಾಷಿಗರು ಮತ್ತು ಮುಸ್ಲಿಮರಿಗೆ ಸಂಬಂಧಪಟ್ಟಂತೆ ರಾಜಕೀಯ ಪರಿಹಾರ ದೊರಕಿಸಿಕೊಡುವುದು ನಮ್ಮ ಉದ್ದೇಶ. ಈ ಸಂಬಂಧ ನಾವು ಸತತ ಸಮಾಲೋಚನೆಗಳನ್ನು ನಡೆಸುತ್ತಿದ್ದೇವೆ. ನಮ್ಮ ಉದ್ದೇಶ ಶಾಂತಿ ನೆಲೆಸುವುದು ಎಂದು ಸಂಪಂಥನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ