ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳಕ್ಕೆ ಅಕ್ರಮ ಪ್ರವೇಶ: ಹತ್ತು ಟಿಬೆಟಿಗರ ಸೆರೆ (Nepal | Tibetans | Kathmandu | Dharamshala | Dalai Lama)
Bookmark and Share Feedback Print
 
ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ನೇಪಾಳವನ್ನು ಅಕ್ರಮವಾಗಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆ ಸೇರಿದಂತೆ ಹತ್ತು ಮಂದಿ ಟಿಬೆಟಿಯನ್‌ರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಠ್ಮಂಡು ಪೂರ್ವಭಾಗದ ಡೋಲಾಖಾ ಜಿಲ್ಲೆಯ ಲಾಮಾಬಾಗರ್‌ನಲ್ಲಿ ಯಾವುದೇ ಅಧಿಕೃತ ದಾಖಲಾತಿ ಇಲ್ಲದೆ ಗಡಿಯನ್ನು ಪ್ರವೇಶಿಸಿದ ಹತ್ತು ಮಂದಿಯನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ಹೇಳಿದ್ದಾರೆ.

ತದನಂತರ ಬಂಧಿತರನ್ನು ಇಮಿಗ್ರೇಶನ್ ಡಿಪಾರ್ಟ್‌ಮೆಂಟ್‌ಗೆ ಹಸ್ತಾಂತರಿಸಲಾಯಿತು ಎಂದು ತಿಳಿಸಿರುವ ಅಧಿಕಾರಿಗಳು, ಅವರನ್ನು ಇಲ್ಲಿನ ಚೀನಾ ರಾಯಭಾರ ಕಚೇರಿ ಮೂಲಕ ತಾಯ್ನಾಡಿಗೆ ಗಡಿಪಾರು ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಪ್ರತಿವರ್ಷ 2ರಿಂದ 2,500ಟಿಬೆಟಿಯನ್‌ ಪ್ರಜೆಗಳು ಅಕ್ರಮವಾಗಿ ಗಡಿಯಿಂದ ನೇಪಾಳ ಪ್ರವೇಶಿಸುತ್ತಾರೆ. ಅವರು ಇಲ್ಲಿಂದ ಧರ್ಮಶಾಲಾಕ್ಕೆ ಭೇಟಿ ನೀಡಿ ತಮ್ಮ ಧಾರ್ಮಿಕ ಗುರು ದಲೈಲಾಮಾ ಅವರನ್ನು ಭೇಟಿ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ