ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನಕ್ಕೆ ಡ್ರೋನ್ ವಿಮಾನ: ಅಮೆರಿಕಾ ಇಬ್ಬಂದಿತನ (drone spy planes | Pakistan | Robert Gates | US)
Bookmark and Share Feedback Print
 
ಇಸ್ಲಾಮಾಬಾದ್: ಎರಡು ದೇಶಗಳ ನಡುವಿನ ಮಿಲಿಟರಿ ಸಂಬಂಧದ ಭಾಗವಾಗಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರರಹಿತ ಡ್ರೋನ್ ಬೇಹುಗಾರಿಕಾ ವಿಮಾನಗಳನ್ನು ನೀಡುವ ಬಗ್ಗೆ ಅಮೆರಿಕಾ ಯೋಚಿಸುತ್ತಿದೆ ಎಂದು ಭಾರತ ಪ್ರವಾಸ ಮುಗಿಸಿ ಪಾಕಿಸ್ತಾನದಲ್ಲಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಹೇಳಿದ್ದಾರೆ.

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತದಲ್ಲಿ ಪಾಕಿಸ್ತಾನವನ್ನು ಒತ್ತಾಯಿಸಿದ್ದ ಗೇಟ್ಸ್, ಮತ್ತೊಂದು ಮುಂಬೈಯಂತಹ ದಾಳಿ ನಡೆದಲ್ಲಿ ಭಾರತವನ್ನು ಯುದ್ಧ ಮಾಡುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈಗ ಪಾಕಿಸ್ತಾನ ಪ್ರವಾಸದಲ್ಲಿರುವ ಅವರು, ಭಯಾನಕ ಡ್ರೋನ್ ವಿಮಾನಗಳನ್ನು ನೀಡುವ ಪ್ರಸ್ತಾಪವನ್ನು ಮಾಡಿದ್ದಾರೆ.

ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ಭದ್ರತಾ ಸಂಬಂಧಗಳ ಕುರಿತು ಅಧಿಕೃತ ಮಾತುಕತೆ ನಡೆಸಲು ಇಸ್ಲಾಮಾಬಾದ್‌ಗೆ ಆಗಮಿಸಿರುವ ಗೇಟ್ಸ್, ಅಮೆರಿಕಾವು ಬೇಹುಗಾರಿಕೆ ಮತ್ತು ಕಣ್ಗಾವಲಿಗೆ ಬಳಕೆಯಾಗುವ ಡ್ರೋನ್ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸುವ ಬಗ್ಗೆ ಪರಿಗಣಿಸುತ್ತಿದೆ ಎಂದು ತಿಳಿಸಿದ್ದಾರೆ.

ಆದರೆ ಶಸ್ತ್ರಾಸ್ತ್ರರಹಿತ ಡ್ರೋನ್ ಬೇಹುಗಾರಿಕಾ ವಿಮಾನಗಳನ್ನು ಭಾರತದ ವಿರುದ್ಧದ ಕಾರ್ಯಾಚರಣೆಗಳಿಗೆ ಪಾಕಿಸ್ತಾನ ಬಳಸುವ ಸಾಧ್ಯತೆಗಳಿರುವುದರಿಂದ ಅಮೆರಿಕಾ ಪ್ರಸ್ತಾಪಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸುವ ನಿರೀಕ್ಷೆಗಳಿವೆ.

ಅಮೆರಿಕಾವು ಅಫಘಾನಿಸ್ತಾನ ಗಡಿ ಪ್ರದೇಶದ ಪಾಕಿಸ್ತಾನ ಪ್ರಾಂತ್ಯಗಳ ಬುಡಕಟ್ಟು ಪ್ರದೇಶಗಳ ಮೇಲೆ ನಡೆಸುತ್ತಿದ್ದ ಡ್ರೋನ್ ದಾಳಿಗಳನ್ನು ತೀವ್ರವಾಗಿ ವಿರೋಧಿಸಿದ್ದ ಪಾಕಿಸ್ತಾನ ಸರಕಾರವು, ತನಗೆ ಮಾನವರಹಿತ ವೈಮಾನಿಕ ತಂತ್ರಜ್ಞಾನವನ್ನು ನೀಡುವಂತೆ ಅಮೆರಿಕಾವನ್ನು ಒತ್ತಾಯಿಸಿತ್ತು. ಅದರ ಮೂಲಕ ತಾಲಿಬಾನ್ ಭಯೋತ್ಪಾದಕರ ಚಲನವಲನಗಳನ್ನು ಗುರುತಿಸಿ ಶಸ್ತ್ರಾಸ್ತ್ರ ಪಡೆಗಳು ಹೋರಾಟ ನಡೆಸಲು ಸುಲಭವಾಗುತ್ತದೆ ಎಂಬುದು ಪಾಕಿಸ್ತಾನದ ವಾದವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ