ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೆಕ್ಸ್ ಮಿತಿ ಮೀರಿದರೆ ಮಣಿಕಟ್ಟು ನೋವು ಬರತ್ತಂತೆ..! (Too Much Sex | Wrist Pain | computer use | Couple)
Bookmark and Share Feedback Print
 
ನಿರಂತರ ಕಂಪ್ಯೂಟರ್ ಬಳಕೆ ಅಥವಾ ಕಠಿಣ ಯಂತ್ರಗಳಲ್ಲಿ ಅವಿರತ ಕೆಲಸ ಮಾಡುವುದರಿಂದ ಮಣಿಕಟ್ಟು ನೋವು ಬರುವ ಸಾಧ್ಯತೆಗಳು ಹೆಚ್ಚು ಎಂಬುದು ಸಾಮಾನ್ಯ ಅನಿಸಿಕೆಯಾಗಿತ್ತು. ಆದರೆ ಇದೀಗ ನೂತನ ಸಂಶೋಧನೆಯೊಂದರ ಪ್ರಕಾರ ಅತಿ ಹೆಚ್ಚಿನ ಲೈಂಗಿಕ ಚಟುವಟಿಕೆ ನಡೆಸಿದರೂ ಕೈ ನೋವು ಉಂಟಾಗಬಹುದು ಎಂದು ಹೇಳಲಾಗಿದೆ.

ಜೋಡಿ 'ಪ್ರೀತಿ' ಮಾಡುವ ಸಂದರ್ಭದಲ್ಲಿ ಮಣಿಕಟ್ಟಿನ ಮೇಲೆ ಆಗಾಗ ಹೆಚ್ಚುವರಿ ಭಾರ ಬೀಳುವುದರಿಂದ ಮಣಿಕಟ್ಟು ಮೂಳೆ ಹಾನಿಗೀಡಾಗುತ್ತದೆ. ಮಣಿಕಟ್ಟು ಸಮಸ್ಯೆಯುಂಟಾಗುವ ಮೂಲ ಕಾರಣಗಳಲ್ಲಿ ಇದೂ ಒಂದು ಬ್ರಿಟನ್‌ನ ವೈದ್ಯಕೀಯ ತಜ್ಞರು ತಿಳಿಸಿದ್ದಾರೆಂದು 'ದಿ ಸನ್' ಪತ್ರಿಕೆ ವರದಿ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಮಣಿಕಟ್ಟು ಮೂಳೆಯ ತೊಂದರೆಗಳು ಹೆಚ್ಚುತ್ತಿರುವುದಕ್ಕೆ ಕಾಮಕ್ರೀಡೆ ಕೂಡ ಕಾರಣವಾಗಿದ್ದು, ಗಂಡು-ಹೆಣ್ಣುಗಳಿಬ್ಬರೂ ಎರಡೂ ಕೈಗಳನ್ನು ಒಂದೇ ಸಮಯದಲ್ಲಿ ಒತ್ತಡಕ್ಕೆ ಒಳಪಡಿಸುವುದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಡಾ. ಜಾನ್ ಜೆನಿಯನ್ ತಿಳಿಸಿದ್ದಾರೆ.

ತೋಳಿನ ಮೂಲಕ ಕೈಗೆ ಹಾದು ಹೋಗುವ ನರದ ಮೇಲೆ ಒತ್ತಡ ಬಿದ್ದಾಗ ಅಥವಾ ಒತ್ತಲ್ಪಟ್ಟಾಗ ನೋವು, ಅಶಕ್ತತೆಗಳು ಉಂಟಾಗುವುದರ ಪರಿಣಾಮ ಮಣಿಕಟ್ಟು ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ವಿವರಣೆ ನೀಡಲಾಗಿದೆ.

ಮಿಲನದ ಹೆಚ್ಚಿನ ಸಂದರ್ಭಗಳಲ್ಲಿ ಪುರುಷನ ಕೈಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಒತ್ತಡ ತಪ್ಪಿಸುವ ಭಂಗಿ ಬದಲಾವಣೆಯಿಂದ ಸಂಭಾವ್ಯ ಮಣಿಕಟ್ಟು ತೊಂದರೆಗಳನ್ನು ನೀಗಿಸಿಕೊಳ್ಳಬಹುದಾಗಿದೆ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ