ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದಿಲ್ಲ: ಪ್ರಚಂಡ (Nepal | Prachanda | India | colonial mentality | Maoist)
Bookmark and Share Feedback Print
 
ನೇಪಾಳದ ಭೂಭಾಗವನ್ನು ಭಾರತ ಕಬಳಿಸುತ್ತಿರುವುದಾಗಿ ಮಾವೋ ವರಿಷ್ಠ, ಮಾಜಿ ಪ್ರಧಾನಿ ಪ್ರಚಂಡ ಗಂಭೀರವಾಗಿ ಆರೋಪಿಸಿದ್ದು, ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳ ಕೈ ಮೇಲಾಗಲು ಬಿಡುವುದಿಲ್ಲ ಎಂದು ಶಪಥಗೈದಿದ್ದಾರೆ.

'ಭಾರತದ ಕೆಲವು ರಾಜಕಾರಣಿಗಳಿಗೆ ಇಂದಿಗೂ ಬ್ರಿಟಿಷ್ ವಸಾಹತುಶಾಹಿ ಪದ್ಧತಿಯ ಮನಸ್ಥಿತಿಯಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ' ಎಂದು ದೂರಿರುವ ಪ್ರಚಂಡ ನೆರೆಯ ನೇಪಾಳದ ವ್ಯವಹಾರಗಳ ಬಗ್ಗೆ ಭಾರತ ಅನಾವಶ್ಯಕವಾಗಿ ಮೂಗು ತೂರಿಸುತ್ತಿದೆ ಎಂದರು.

ರಾಷ್ಟ್ರೀಯ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವಲ್ಲಿ ಮಾವೋವಾದಿ ಪಡೆಗಳು ಮಾತ್ರ ಸಶಕ್ತವಾಗಿದೆ ಎಂದಿರುವ ಪ್ರಚಂಡ, ನೆರೆಯ ನೇಪಾಳದ ಭೂ ಪ್ರದೇಶವನ್ನು ಅತಿಕ್ರಮಣ ಮಾಡುತ್ತಿರುವ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸುವುದಾಗಿಯೂ ಪುನರುಚ್ಚರಿಸಿದರು.

ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸುವ ಇಚ್ಛೆ ನಮಗಿಲ್ಲ, ಅದೇ ರೀತಿ ಭಾರತ ಕೂಡ ನೇಪಾಳದ ಒಂದಿಂಚೂ ಭೂಮಿಯನ್ನು ಅತಿಕ್ರಮಣ ಮಾಡಬಾರದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ