ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇನ್ನೂ ಐದು ವರ್ಷ ಮುಂದುವರಿಯಲಿದೆ ಅಫ್ಘಾನ್ ಕಾರ್ಯಾಚರಣೆ (Foreign force | Afghanistan | Taliban | USA)
Bookmark and Share Feedback Print
 
ತಾಲಿಬಾನ್ ವಿರುದ್ಧದ ಸಮರವನ್ನು ವಿದೇಶಿ ಪಡೆಗಳು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಬೇಕು ಎಂಬ ತೀರ್ಮಾನಕ್ಕೆ ಇದೇ ವಾರ ನಡೆಯಲಿರುವ ಅಫಘಾನಿಸ್ತಾನ ಕುರಿತ ಪ್ರಮುಖ ಅಂತಾರಾಷ್ಟ್ರೀಯ ಸಭೆಯೊಂದು ಬರಲಿದೆ ಎಂದು ಪತ್ರಿಕೆಯೊಂದು ಸೋಮವಾರ ವರದಿ ಮಾಡಿದೆ.

ಗುರುವಾರ ಲಂಡನ್‌ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರದ ಕುರಿತ ಪ್ರಕಟಣೆಯನ್ನು ಉಲ್ಲೇಖಿಸಿರುವ 'ದಿ ಟೈಮ್ಸ್' ಪತ್ರಿಕೆ, ಅಫ್ಘಾನ್ ಪಡೆಗಳು ಮುಂದಿನ ಅರ್ಧದಶಕಗಳ ಕಾಲ ಬಾಹ್ಯ ಭದ್ರತೆಯ ಜವಾಬ್ದಾರಿಯನ್ನು ಬಿಟ್ಟುಕೊಡಲಿವೆ ಎಂದು ವರದಿ ಮಾಡಿದೆ.

ಹಾಗಾಗಿ ಅಲ್ಲಿಯವರೆಗೆ ಪಾಶ್ಚಿಮಾತ್ಯ ಪಡೆಗಳ ಸಹಕಾರ ಮುಂದುವರಿಯಲಿದೆ.

ಅಫಘಾನಿಸ್ತಾನದಲ್ಲಿನ ಅರಕ್ಷಿತ ಪ್ರದೇಶಗಳಲ್ಲಿ ಮುಂದಿನ ಮೂರು ವರ್ಷಗಳೊಳಗೆ ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದು ಮತ್ತು ಮುನ್ನಡೆಸುವುದು ಹಾಗೂ ಐದು ವರ್ಷಗಳೊಳಗೆ ದೇಶದ ಭೌತಿಕ ಭದ್ರತೆಯ ಜವಾಬ್ದಾರಿಯನ್ನು ಪಡೆಯುವುದಕ್ಕೆ ಅಫ್ಘಾನ್ ಪಡೆಗಳು ಬದ್ಧತೆ ಸೂಚಿಸಿವೆ ಎಂದು ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಾಶ್ಚಿಮಾತ್ಯ ಪಡೆಗಳ ಸಹಕಾರದೊಂದಿಗೆ ಈ ವರ್ಷ ಅಥವಾ 2011ರ ಅಂತ್ಯದೊಳಗೆ ಅಫಘಾನಿಸ್ತಾನದ ಭದ್ರತಾ ಪಡೆಗಳು ದೇಶದ ಅತೀ ಹೆಚ್ಚಿನ ಸುರಕ್ಷಿತ ಪ್ರದೇಶಗಳ ಉಸ್ತುವಾರಿಯನ್ನು ಪಡೆದುಕೊಳ್ಳಲಿವೆ ಎಂದೂ ಈ ದಾಖಲೆಯಲ್ಲಿ ವಿವರಿಸಲಾಗಿದೆ.

ಅಮೆರಿಕಾ ನಂತರ ಅತೀ ಹೆಚ್ಚು ಪಡೆಗಳನ್ನು ಅಫಘಾನಿಸ್ತಾನಕ್ಕೆ ಕಳುಹಿಸಿರುವ ಬ್ರಿಟನ್, ಸೋರಿಕೆಯಾದ ದಾಖಲೆಗಳ ಮಾಹಿತಿಗಳ ಕುರಿತು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ