ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹದಿಹರೆಯದ ಯೆಮನ್‌ ಯುವತಿಯನ್ನು ಮದುವೆಯಾಗಿದ್ದ ಲಾಡೆನ್! (Osama bin Laden | Yemeni girl | fifth marriage | Amal al-Sadah)
Bookmark and Share Feedback Print
 
ಯೆಮನ್ ಜತೆಗಿನ ರಾಜಕೀಯ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಅಲ್‌ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ತನಗಿಂತ ಅರ್ಧಕ್ಕೂ ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದ ಎಂದು ವರದಿಗಳು ಹೇಳಿವೆ.

ಐದನೇ ಮದುವೆಯಾಗಲು ಬಯಸಿದ್ದ ಲಾಡೆನ್, ತನ್ನ ಅತಿ ನಂಬಿಗಸ್ತ ಸಲಹೆಗಾರಲ್ಲಿ ಹುಡುಗಿ ಹುಡುಕುವಂತೆ ಹೇಳಿದ್ದ. ಆತನಿಗೆ ಯೆಮನ್ ದೇಶದ ಹುಡುಗಿಯೇ ಬೇಕಾಗಿತ್ತು. ತನ್ನ ಬಿಲಿಯನೇರ್ ತಂದೆಯ ತವರಿನ ಹುಡುಗಿಯನ್ನು ಮದುವೆಯಾಗುವ ಆ ದೇಶದೊಂದಿಗಿನ ಸಂಬಂಧವನ್ನು ವೃದ್ದಿಸುವುದು ಆತನ ಪ್ರಮುಖ ಉದ್ದೇಶವಾಗಿತ್ತು.

ಲಾಡೆನ್ ಬೇಡಿಕೆಯಂತೆ ಆತನ ಯೆಮನ್ ಸಹಚರ ಶೇಖ್ ರಸಾದ್ ಇಸ್ಮಾಯಿಲ್ ಎಂಬಾತ ಹುಡುಗಿ ಹುಡುಕಾಟ ನಡೆಸಿದ್ದ. ಆತನೇ ವಿವರಿಸುವ ಪ್ರಕಾರ ಲಾಡೆನ್‌ಗೆ ಆತನ ಇತರ ಪತ್ನಿಯರ ಬಗ್ಗೆ ಹೊಟ್ಟೆಕಿಚ್ಚು ಪಡದ, ಹದಿಹರೆಯದ, ಸಮಾಧಾನಿಯಾದ, ದೈನ್ಯಳಾಗಿರುವ, ಧಾರ್ಮಿಕ ಬದ್ಧತೆ ಹೊಂದಿರುವ ಹುಡುಗಿ ಬೇಕಾಗಿತ್ತು. ಹೆಚ್ಚಿನ ಪತ್ನಿಯರಿದ್ದರೆ ಅವರ ನಡುವೆ ಕಾದಾಟ ಸಾಮಾನ್ಯ. ಹಾಗಾಗಿ ಹೊಸ ಹೆಂಡತಿಗೆ ಹೊಟ್ಟೆಕಿಚ್ಚು ಇರಬಾರದು ಎಂದು ಲಾಡೆನ್ ಬಯಸಿದ್ದ ಎಂದು ಆತ ವಿವರಿಸಿದ್ದಾನೆ.

ತನ್ನ ಮನೆಯ ಪಕ್ಕವೇ ಇದ್ದ ಕುಟುಂಬವನ್ನು ಇದಕ್ಕಾಗಿ ಪ್ರಸ್ತಾಪ ನಡೆಸಿದ್ದ ಲಾಡೆನ್ ಸಹಚರ, ನಾಗರಿಕ ಸೇವಕನ 18 ವರ್ಷದ ಪುತ್ರಿ ಅಮಾಲ್ ಅಲ್ ಸದಾಹ್ ಎಂಬಾಕೆಯನ್ನು 43ರ ಹರೆಯದ ಅಲ್‌ಖೈದಾ ನಾಯಕನಿಗೆ ಮದುವೆ ಮಾಡಿಸುವ ಕುರಿತು ಒಪ್ಪಿಸಿದ್ದ.

ಆಕೆ ತೀರಾ ಕಿರಿಯಳಾಗಿದ್ದರೂ ಧರ್ಮ ಮತ್ತು ಆಧ್ಯಾತ್ಮದ ಕುರಿತು ಸಾಕಷ್ಟು ತಿಳಿದುಕೊಂಡಿದ್ದಳು. ಅಲ್ಲದೆ ಲಾಡೆನ್ ವಿಚಾರಗಳಲ್ಲಿ ನಂಬಿಕಸ್ತಳಾಗಿದ್ದಳು ಎಂದು ಲಾಡೆನ್ ಸಹಚರ ವಿವರಿಸಿದ್ದಾನೆ.

ತನ್ನ ತಂದೆಗಿಂತಲೂ ಹೆಚ್ಚು ವಯಸ್ಸಿನ ಮುದುಕನನ್ನು ಮದುವೆಯಾಗುತ್ತಿದ್ದಿ ಎಂಬ ಇತರರ ಟೀಕೆಗಳಿಗೂ ಆತ ಕಿವಿಗೊಟ್ಟಿಲ್ಲ. ಗಂಡನ ಎಲ್ಲಾ ಬಯಕೆಗಳಿಗೆ ಸ್ಪಂದಿಸುತ್ತಾ, ಆತನು ಹೇಳಿದಂತೆ ಕೇಳಿಕೊಂಡಿರುವುದರಿಂದ ತನಗೆ ಸ್ವರ್ಗದಲ್ಲಿ ಜಾಗ ಸಿಗುತ್ತದೆ ಎಂಬುದು ಆಕೆಯ ನಂಬಿಕೆಯಾಗಿತ್ತು.

ಪತ್ನಿ ಅಮಾಲ್ ಆಕೆಯ ತವರಿನಲ್ಲೇ ಮಗುವಿಗೆ ಜನ್ಮ ನೀಡಬೇಕು ಎಂದು ಲಾಡೆನ್ ಬಯಸಿದ್ದ ಹಿನ್ನೆಲೆಯಲ್ಲಿ ಆಕೆ ಕಂದಹಾರ್‌ನಲ್ಲೇ ಉಳಿದುಕೊಂಡಿದ್ದಳು. ಅಮೆರಿಕಾದ ಮೇಲೆ ನವೆಂಬರ್ 9ರಂದು ದಾಳಿ ನಡೆಸಿದ ದಿನದೊಳಗೆ ಆಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಳು ಎಂದು ಲಾಡೆನ್ ಸಹಚರ ವಿವರಣೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ