ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಗ್ದಾದ್: ಪ್ರಬಲ ತ್ರಿವಳಿ ಕಾರ್ ಬಾಂಬ್ ಸ್ಫೋಟಕ್ಕೆ 16ಬಲಿ (Baghdad | Bomb blasts | Iraq | police | Western journalists)
Bookmark and Share Feedback Print
 
ಇಲ್ಲಿನ ಪ್ರತಿಷ್ಠಿತ ಹೋಟೆಲ್‌ಗಳ ಸಮೀಪ ಪ್ರಬಲ ಮೂರು ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ 16ಮಂದಿ ಬಲಿಯಾಗಿದ್ದು, ಹಲವಾರು ಜನರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಷ್ಠಿತ ಶೆರ್ಟಾನ್ ಹೋಟೆಲ್ ಕಾರ್ ಪಾರ್ಕಿಂಗ್ ಬಳಿ ಮಧ್ಯಾಹ್ನ 3.40ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿತ್ತು. ಇದರಿಂದಾಗಿ ಹಲವಾರು ಕಟ್ಟಡಗಳು ಜಖಂಗೊಂಡಿವೆ.

ತದನಂತರ ಬ್ಯಾಬಿಲೋನ್ ಮತ್ತು ಅಲ್ ಹಮಾರಾ ಹೋಟೆಲ್ ಸಮೀಪ ಸ್ಫೋಟ ನಡೆದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ. ಆದರೆ ಸ್ಫೋಟ ಕುರಿತಂತೆ ಅಧಿಕಾರಿಗಳು ಈವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

ಕಳೆದ ಡಿಸೆಂಬರ್ 8ರಂದು ಬಾಗ್ದಾದ್‌ನಲ್ಲಿ ಐದು ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 127ಮಂದಿ ಬಲಿಯಾಗಿದ್ದು, 500ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ