ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸದ್ದಾಂ ಬಂಟ 'ಕೆಮಿಕಲ್ ಆಲಿ'ಯನ್ನು ನೇಣಿಗೇರಿಸಿದ ಇರಾಕ್ (Chemical Ali | Iraq | Saddam Hussein | Ali Hassan al-Majid)
Bookmark and Share Feedback Print
 
PR
ನಾಲ್ಕನೇ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನಂತರ ಸದ್ದಾಂ ಹುಸೇನ್ ಬಂಟ 'ಕೆಮಿಕಲ್ ಆಲಿ' ಕುಖ್ಯಾತಿಯ ನರಹಂತಕ ಆಲಿ ಹಸನ್ ಅಲ್ ಮಜಿದ್‌ನನ್ನು ಸೋಮವಾರ ನೇಣಿಗೆ ಹಾಕಲಾಗಿದೆ ಎಂದು ಇರಾಕ್ ಸರಕಾರ ಪ್ರಕಟಿಸಿದೆ.

ಈ ಹಿಂದೆಯೇ ನೇಣಿಗೇರಲ್ಪಟ್ಟ ಸದ್ದಾಂ ಹುಸೇನ್ ನಂಬಿಕಸ್ತ ಬಂಟನಾಗಿದ್ದ ಕೆಮಿಕಲ್ ಆಲಿ, ಹಾಲಬ್ಜಾದಲ್ಲಿನ 5,000ಕ್ಕೂ ಹೆಚ್ಚು ಕುರ್ದಿಶ್ ಜನಾಂಗದವರನ್ನು ವಿಷಾನಿಲ ದಾಳಿ ಮೂಲಕ ಸಾಯಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನಿಗೆ ನಾಲ್ಕನೇ ಮರಣದಂಡನೆಗಳನ್ನು ವಿಧಿಸಿತ್ತು.

ಜನವರಿ 17ರಂದು ಆತನಿಗೆ ನಾಲ್ಕನೇ ಮರಣದಂಡನೆಯನ್ನು ಇರಾಕ್ ನ್ಯಾಯಾಲಯವೊಂದು ಪ್ರಕಟಿಸಿತ್ತು. 1988ರ ಸಮೀಪ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಆತ ಈಶಾನ್ಯ ಕುರ್ದಿಶ್ ನಗರ ಹಾಲಬ್ಜಾದಲ್ಲಿ ಸಾವಿರಾರು ಜನರ ಸಾಮೂಹಿಕ ಹತ್ಯೆ ನಡೆಸಿದ್ದ.

ಸದ್ದಾಂ ಹುಸೇನ್ ನಿಕಟ ಸಂಬಂಧಿಯಾಗಿದ್ದ ಕೆಮಿಕಲ್ ಆಲಿ, 1980ರ ಸಮಯದಲ್ಲಿ ಕ್ರೂರ ದಾಳಿಗಳು, ಬಾಂಬ್‌ ಮತ್ತು ಸಾಮೂಹಿಕ ಗಡಿಪಾರಿನ ಮೂಲಕ ಅಂದಾಜು 1,82,000 ಕುರ್ದಿಶ್ ಜನರನ್ನು ಕೊಂದು ಹಾಕಿದ್ದ.

ಸದ್ದಾಂ ಸರ್ವಾಡಳಿತದ ಸಂದರ್ಭದಲ್ಲಿ ಈತ ಇರಾಕ್‌ನ ರಕ್ಷಣಾ ಸಚಿವ, ಆಂತರಿಕ ಸಚಿವ, ಮಿಲಿಟರಿ ಕಮಾಂಡರ್, ಗುಪ್ತಚರ ವಿಭಾಗದ ಮುಖ್ಯಸ್ಥ ಹಾಗೂ ಗಲ್ಫ್ ಯುದ್ಧದ ಸಂದರ್ಭದಲ್ಲಿ ಕುವೈಟ್ ರಾಜ್ಯಪಾಲನಾಗಿಯೂ ಕಾರ್ಯನಿರ್ವಹಿಸಿದ್ದ.

ಶಿಯಾ ಮುಸ್ಲಿಮರ ಸಾಮೂಹಿಕ ಹತ್ಯೆ ನಡೆಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇರಾಕ್ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ನನ್ನು 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಗಿತ್ತು.

ಕೆಮಿಕಲ್ ಆಲಿಯನ್ನು ನೇಣಿಗೆ ಹಾಕಲಾಗುತ್ತದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಬಾಗ್ದಾದ್‌ನ ಹೊಟೇಲುಗಳನ್ನು ಗುರಿಯಾಗಿರಿಸಿಕೊಂಡು ಭಾರೀ ಭಯೋತ್ಪಾದಕ ದಾಳಿಗಳನ್ನು ನಡೆಸಲಾಗಿದ್ದು, ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ.

ಮೂರು ಕಾರ್ ಬಾಂಬ್ ದಾಳಿಗಳನ್ನು ನಡೆಸಲಾಗಿದೆ. ಮೊದಲ ದಾಳಿ ನವಾಜ್‌ನಲ್ಲಿನ ಹೊಟೇಲ್ ಸಮೀಪ, ಎರಡನೇ ದಾಳಿಯನ್ನು ಕರದಾ ಪ್ರಾಂತ್ಯದ ಬ್ಯಾಬಿಲೋನಾ ಹಾಗೂ ಮೂರನೇ ದಾಳಿಯನ್ನು ಬದ್ರಿಯಾದಲ್ಲಿನ ಹಮ್ರಾ ಹೊಟೇಲ್ ಬಳಿ ನಡೆಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ