ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ; ಭಾರತೀಯರಿಗೆ ದಾಳಿ- ಐವರ ಮೇಲೆ ಕೇಸು (Indian students | Australia | Melbourne | Racial attack)
Bookmark and Share Feedback Print
 
ಸೋಮವಾರ ರಾತ್ರಿ ಮೆಲ್ಬೋರ್ನ್‌ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಒಂಬತ್ತು ಮಂದಿಯ ಪೈಕಿ ಐವರ ಮೇಲೆ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಮೆಲ್ಬೋರ್ನ್‌ನ ಯಾರವಿಲ್ಲೆಯ ಪಾರ್ಕೊಂದರಲ್ಲಿ ಭಾರತೀಯ ವಿದ್ಯಾರ್ಥಿ ನಿತಿನ್ ಗಾರ್ಗ್ ಅವರಿಗೆ ಇರಿದ ಪ್ರಕರಣದ ಮೂರು ವಾರಗಳ ನಂತರ ಮತ್ತೊಂದು ದಾಳಿ ಸೋಮವಾರ ನಡೆದಿತ್ತು.

ಸೋಮವಾರ ರಾತ್ರಿ 10.20ರ ಸಮಯಕ್ಕೆ ದಾಳಿಕೋರರು ಇಬ್ಬರು ಭಾರತೀಯ ವಿದ್ಯಾರ್ಥಿಗಳಲ್ಲಿ ವಾಗ್ವಾದ ನಡೆಸುತ್ತಿದ್ದಾಗ ಒಬ್ಬ ಭಾರತೀಯ ವಿದ್ಯಾರ್ಥಿಯನ್ನು ದೂಡಿ ಹಾಕಿದ್ದ. ಈ ಸಂದರ್ಭದಲ್ಲಿ ದಾಳಿಕೋರರಲ್ಲಿದ್ದ ಆಯುಧವೊಂದು 18ರ ಹರೆಯದ ಮತ್ತೊಬ್ಬ ವಿದ್ಯಾರ್ಥಿಯ ಎಡಗಿವಿಯನ್ನು ಸವರಿ ಗಾಯ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

22ರ ಹರೆಯದ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯನ್ನು ಕೂಡ ನೆಲಕ್ಕೆ ಕೆಡವಲಾಗಿತ್ತು. ಆತನ ಮುಂಗೈ ಮೇಲೂ ಗಾಯಗಳಾಗಿದ್ದವು ಎಂದು ಆಸ್ಪ್ಟೇಲಿಯಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ದಾಳಿಕೋರರು ಏಷಿಯಾದವರಂತಿದ್ದರು ಎಂದು ಹೇಳಲಾಗಿದ್ದು, ಘಟನೆ ನಂತರ ಪರಾರಿಯಾಗಿದ್ದರು.

ದಾಳಿಗೊಳಗಾಗಿರುವ ಇಬ್ಬರು ವಿದ್ಯಾರ್ಥಿಗಳು ಭಾರತೀಯರು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಇದು ಜನಾಂಗೀಯ ದಾಳಿಯೇ ಎಂಬುದರ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

ಈ ದಾಳಿಯ ಹಿಂದಿದ್ದ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಐವರ ಮೇಲೆ ಕಲಹ, ಉದ್ದೇಶಪೂರ್ವಕವಾಗಿ ಗಾಯ ಮಾಡಿದ್ದು ಮತ್ತು ಹಲ್ಲೆ ಆರೋಪಗಳನ್ನು ದಾಖಲಿಸಲಾಗಿದ್ದರೆ, ಉಳಿದ ನಾಲ್ವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅವರ ವಿರುದ್ಧವೂ ತನಿಖೆ ಮುಂದುವರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ