ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ಮರು ನಿರ್ಮಾಣದಲ್ಲಿ ಭಾರತ ಯಾಕೆ?: ಪಾಕ್ (India | Afghanistan | Pakistan | USA)
Bookmark and Share Feedback Print
 
ಯುದ್ಧದಿಂದ ಬಳಲಿ ಬೆಂಡಾಗಿರುವ ಅಫಘಾನಿಸ್ತಾನದ ಮರು ನಿರ್ಮಾಣದಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ನೀಡುವುದರ ವಿರುದ್ಧ ಇತರ ಎಂಟು ದೇಶಗಳೊಂದಿಗೆ ಸೆಟೆದು ನಿಂತಿರುವ ಪಾಕಿಸ್ತಾನವು ಅಮೆರಿಕಾದ ಮೇಲೆ ಒತ್ತಡ ಹೇರಲಿದೆ.

ಅಫಘಾನಿಸ್ತಾನದಲ್ಲಿನ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲು ಟರ್ಕಿಯಲ್ಲಿ ಅಮೆರಿಕಾ ಮತ್ತು ಬ್ರಿಟನ್‌ಗಳ ಜತೆ ಅಫ್ಘಾನ್‌ನ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ, ಇರಾನ್, ಚೀನಾ, ತಜಕಿಸ್ತಾನ್, ತುರ್ಕಮೇನಿಸ್ತಾನ್ ಮತ್ತು ಉಜ್ಬೇಕಿಸ್ತಾನಗಳು ಭಾಗವಹಿಸಲಿದ್ದು, ಈ ರಾಷ್ಟ್ರಗಳ ಜತೆ ಇಸ್ಲಾಮಾಬಾದ್ ಭಾರತ ವಿರೋಧಿ ನೀತಿಯನ್ನು ಪ್ರದರ್ಶಿಸಲಿದೆ ಎಂದು ವರದಿಯೊಂದು ಹೇಳಿದೆ.

ಅಫಘಾನಿಸ್ತಾನ ನೆಲದಲ್ಲಿ ಹೆಜ್ಜೆಯೂರುತ್ತಿರುವ ಭಾರತವನ್ನು ಹಿಂಜರಿಯುವಂತೆ ಮಾಡಬೇಕು ಎಂದು ಅಫಘಾನಿಸ್ತಾನದ ನೆರೆ ರಾಷ್ಟ್ರಗಳ ಜತೆಗೂಡಿ ಲಾಬಿ ಮಾಡುತ್ತಿರುವ ಪಾಕಿಸ್ತಾನ, ಈ ಸಭೆಯಲ್ಲಿ ಆ ಕುರಿತು ಪ್ರಸ್ತಾಪ ಮಾಡಲಿದೆ ಎಂದು 'ಡೈಲೀ ಟೈಮ್ಸ್' ಹೇಳಿದೆ.

ಚೀನಾದ ವಿದೇಶಾಂಗ ಸಚಿವ, ಇರಾನ್, ತುರ್ಕಮೇನಿಸ್ತಾನ್, ಉಜ್ಬೇಕಿಸ್ತಾನ್, ತಜಕಿಸ್ತಾನ್, ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂಡ್ ಮತ್ತು ಅಮೆರಿಕಾ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬೂರ್ಕ್ ಅವರ ಸಹಾಯಕ ಪೌಲ್ ಜೋನ್ಸ್ ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಫಘಾನಿಸ್ತಾನ ಮತ್ತು ಈ ಪ್ರಾಂತ್ಯದಲ್ಲಿ ಸ್ಥಿರತೆಯನ್ನು ಮರುಕಳಿಸಲು ಯತ್ನಿಸುವಂತೆ ಈ ಭಾಗದ ದೇಶಗಳನ್ನು ನಾಯಕರು ಒತ್ತಾಯಿಸಲಿದ್ದಾರೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ಅಫಘಾನಿಸ್ತಾನದ ನೆಲವನ್ನು ಬಳಸುತ್ತಿರುವ ಭಾರತವನ್ನು ಅಲ್ಲಿನ ಪುನರ್ ನಿರ್ಮಾಣ ಕಾರ್ಯದಲ್ಲಿ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಹೇಳಿದೆ.

ಅಫಘಾನಿಸ್ತಾನ ನಾಶದಲ್ಲಿ ಪ್ರಮುಖ ಪಾತ್ರವಹಿಸಿದ್ದ ರಷ್ಯಾದ ಮನೋಸ್ಥಿತಿಯನ್ನೇ ಭಾರತ ಹೊಂದಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ