ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪತನಗೊಂಡ ಬ್ಯೂರಟ್ ಪೈಲಟ್ ಟವರ್ ಸೂಚನೆ ಧಿಕ್ಕರಿಸಿದ್ದ (Pilot | Beirut crash | tower's advice | Ethiopian Airlines)
Bookmark and Share Feedback Print
 
ಬ್ಯೂರಟ್ ವಿಮಾನ ನಿಲ್ದಾಣದಿಂದ ಜಡಿಮಳೆಯೆಡೆಯಲ್ಲೇ ಹೊರಟಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ ಸಾಗರಕ್ಕೆ ಬೀಳುವ ಮೊದಲು ಟವರ್ ಸೂಚನೆಗಳ ವಿರುದ್ಧವಾಗಿ ಪೈಲಟ್ ವಿಮಾನವನ್ನು ಚಲಾಯಿಸಿದ್ದ ಎಂದು ಲೆಬನಾನ್ ಸಾರಿಗೆ ಸಚಿವರು ತಿಳಿಸಿದ್ದಾರೆ.

ಆದರೆ ಅಪಘಾತಕ್ಕೆ ಪ್ರಮುಖ ಕಾರಣ ಇದೆಂದು ಹೇಳಲು ಈಗಲೇ ಸಾಧ್ಯವಿಲ್ಲ. ಇನ್ನಷ್ಟೇ ವಿಮಾನದ ಕಪ್ಪುಪೆಟ್ಟಿಗೆ ಪತ್ತೆಯಾಗಬೇಕಿದ್ದು, ತನಿಖೆ ನಡೆಸಿದ ಬಳಿಕವಷ್ಟೇ ವಿಮಾನ ಪತನದ ಕಾರಣವನ್ನು ಹೇಳಬಹುದು ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ 2.30ಕ್ಕೆ ಬ್ಯೂರಟ್‌ನಿಂದ ಇಥಿಯೋಪಿಯಾ ರಾಜಧಾನಿ ಅಡ್ಡೀಸ್ ಅಬಾಬಾಕ್ಕೆ ಹೊರಟಿದ್ದ ಕೆಲವೇ ನಿಮಿಷಗಳಲ್ಲಿ ವಿಮಾನ ಮೆಡಿಟರೇನಿಯನ್ ಸಮುದ್ರಕ್ಕೆ ಬಿದ್ದ ಪರಿಣಾಮ ವಿಮಾನದಲ್ಲಿದ್ದ ಎಲ್ಲಾ 90 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಈ ವಿಮಾನದ ಪೈಲಟ್ ಆರಂಭದಲ್ಲಿ ಟವರ್ ಸಂಕೇತಗಳನ್ನು ಪಾಲಿಸುತ್ತಿದ್ದ. ಆದರೆ ನಂತರ ಇದ್ದಕ್ಕಿದ್ದಂತೆ ತನ್ನ ನಿರ್ಧಾರವನ್ನು ಬದಲಾಯಿಸಿ, ಸಂಕೇತಗಳ ವಿರುದ್ಧ ನಡೆದುಕೊಂಡಿದ್ದ ಎಂದು ಸಾರಿಗೆ ಸಚಿವ ಘಾಜಿ ಆರಿಧಿ ಪ್ರತಿಕ್ರಿಯಿಸಿದ್ದಾರೆ.

ಆ ಹೊತ್ತಿಗೆ ಪಥವನ್ನು ಸರಿಪಡಿಸಿಕೊಳ್ಳುವಂತೆ ಪೈಲಟ್‌ಗೆ ನಿಯಂತ್ರಣ ಕೇಂದ್ರದಿಂದ ಸೂಚನೆ ನೀಡಲಾಯಿತು. ಆದರೆ ಆತ ಆತುರದಿಂದ ತಕ್ಷಣವೇ ವೇಗದಿಂದ ಪ್ರತಿಕ್ರಿಯಿಸಿದ ಕಾರಣ ಕೆಲವೇ ನಿಮಿಷಗಳಲ್ಲಿ ವಿಮಾನ ರಾಡಾರ್‌ನಿಂದ ಸಂಪೂರ್ಣವಾಗಿ ಮಾಯವಾಯಿತು ಎಂದು ಸುದ್ದಿ ಸಂಸ್ಥೆಗೆ ಸಚಿವರು ತಿಳಿಸಿದ್ದಾರೆ.

ಆದೇಶಗಳನ್ನು ಪಾಲಿಸದ ಕಾರಣಕ್ಕೆ ಪೈಲಟ್‌ನನ್ನು ದೂಷಿಸಬೇಕು ಎಂದು ಯಾರೂ ಹೇಳುತ್ತಿಲ್ಲ. ನಡೆದಿರುವುದಕ್ಕೆ ಹಲವು ಕಾರಣಗಳಿರಬಹುದು. ಕೇವಲ ವಿಮಾನದ ಬ್ಲ್ಯಾಕ್ ಬಾಕ್ಸ್ ಮಾತ್ರ ಸತ್ಯವನ್ನು ಹೊರಗೆಡವಬಹುದು ಎಂದು ಅವರು ವಿವರಣೆ ನೀಡಿದ್ದಾರೆ.

ಲೆಬನಾನ್ ಸಚಿವರ ಹೇಳಿಕೆಗಳು ತೀರಾ ತರಾತುರಿಯವು ಎಂದಿರುವ ಇಥಿಯೋಪಿಯನ್ ವಿಮಾನಯಾನ ಸಂಸ್ಥೆಯ ಮುಖ್ಯಸ್ಥ ಗಿರ್ಮಾ ವೇಕ್, ಕೆಲವೇ ದಿನಗಳಲ್ಲಿ ಇದರ ಹಿಂದಿನ ಕಾರಣಗಳನ್ನು ಪತ್ತೆ ಮಾಡುತ್ತೇವೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ