ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಜೊತೆ ಅಮೆರಿಕ ಮಾತುಕತೆ ನಡೆಸ್ಲಿ: ಕರ್ನಲ್ ಇಮಾಮ್ (Taliban | Colonel Imam | afghanistan | Mullah Omar | US)
Bookmark and Share Feedback Print
 
ಅಫ್ಘಾನಿಸ್ತಾನದ ತಾಲಿಬಾನ್ ಮುಖಂಡ ಮುಲ್ಲಾ ಮುಹಮ್ಮದ್ ಓಮರ್ ಜೊತೆ ಅಮೆರಿಕ ಮಾತುಕತೆ ನಡೆಸಬೇಕೆಂದು ಆಗ್ರಹಿಸಿರುವ ಪಾಕಿಸ್ತಾನದ ನಿವೃತ್ತ ಕರ್ನಲ್ ಸುಲ್ತಾನ್, ಓಮರ್ ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆಹರಿಸುವ ಇಚ್ಚೆಯನ್ನು ಹೊಂದಿರುವುದಾಗಿಯೂ ತಿಳಿಸಿದ್ದಾರೆ.

ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲೆಜೆನ್ಸ್(ಐಎಸ್‌ಐ)‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುವ ಕರ್ನಲ್ ಇಮಾಮ್ ಎಂದೇ ಬಿಂಬಿತವಾಗಿರುವ ಸುಲ್ತಾನ್, ಮುಲ್ಲಾ ಓಮರ್ ಅಮೆರಿಕದ ಜೊತೆ ಮುಕ್ತವಾಗಿ ಮಾತುಕತೆ ನಡೆಸುವ ಇರಾದೆ ಹೊಂದಿರುವುದಾಗಿ ಹೇಳಿದರು.

'ಒಂದು ವೇಳೆ ಅಮೆರಿಕದಿಂದ ಪ್ರಾಮಾಣಿಕವಾದ ಪ್ರತಿಕ್ರಿಯೆ ಬಂದಲ್ಲಿ, ನಿಜಕ್ಕೂ ತಾಲಿಬಾನಿಗಳು ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಿದ್ದಾರೆ. ಅವರು ನಿಮ್ಮ(ಪ್ರತಿಕ್ರಿಯೆ) ಮಾತನ್ನು ಕೇಳುತ್ತಾರೆ. ಆದರೆ ನೀವೇನಾದ್ರೂ ತಾಲಿಬಾನ್ ಅನ್ನು ಒಡೆಯುವ ಸಂಚು ನಡೆಸಿದ್ರೆ, ನಿಮಗೆ ಅದರಿಂದ ತೊಂದರೆ' ಎಂಬುದಾಗಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾಲಿಬಾನ್ ಜೊತೆ ಶಾಂತಿ ಮಾತುಕತೆ ನಡೆಸುವ ಕುರಿತು ನ್ಯಾಟೋ ಉನ್ನತಾಧಿಕಾರಿಯೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ, ಸುಲ್ತಾನ್ ಕೂಡ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ