ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯೆಮೆನ್‌ನಲ್ಲಿ ರಸಹ್ಯ ಕಾರ್ಯಾಚರಣೆಗೆ ಒಬಾಮಾ ಗ್ರೀನ್ ಸಿಗ್ನಲ್ (al Qaeda | Yemen | Barack Obama | Washington | U.S. military)
Bookmark and Share Feedback Print
 
ಅಮೆರಿಕ ಮಿಲಿಟರಿ ಪಡೆ ಮತ್ತು ಗುಪ್ತಚರ ಇಲಾಖೆ ಜಂಟಿಯಾಗಿ ಯೆಮೆನ್ ಪಡೆಯ ನೆರವಿನೊಂದಿಗೆ ರಹಸ್ಯ ಕಾರ್ಯಾಚರಣೆ ನಡೆಸುವುದಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗ್ರೀನ್ ಸಿಗ್ನಲ್ ನೀಡಿರುವುದಾಗಿ ದಿ ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.

ಡಿಸೆಂಬರ್ 24ರಂದು ಅಮೆರಿಕನ್ ಪ್ರಜೆ ಮೇಲೆ ದಾಳಿ ನಡೆಸಿದ್ದು, ಇದೀಗ ಈ ರಹಸ್ಯ ಕಾರ್ಯಾಚರಣೆಗೆ ಒಬಾಮಾ ಅಂಕಿತ ಹಾಕಿದ್ದಾರೆ. ಅಮೆರಿಕನ್ ಪ್ರಜೆ ಅನ್ವರ್ ಅಲ್ ಅವ್‌ಲಖ್ವಿ ಸ್ಥಳೀಯ ಅಲ್ ಖಾಯಿದಾ ಮುಖಂಡರೊಂದಿಗೆ ಮಾತುಕತೆ ನಡೆಸಿರುವುದಾಗಿ ಶಂಕಿಸಲಾಗಿದೆ ಎಂದು ಪತ್ರಿಕೆಯ ವರದಿ ವಿವರಿಸಿದೆ.

ಯೆಮೆನ್‌ನಲ್ಲಿ ಅಲ್ ಖಾಯಿದಾ ಜೊತೆ ಕೈಜೋಡಿಸಿ ಕಾರ್ಯಾಚರಿಸುತ್ತಿರುವ ಅಮೆರಿಕನ್ ಪ್ರಜೆಗಳನ್ನು ಸೆರೆಹಿಡಿಯುವುದು ಅಥವಾ ಕೊಲ್ಲುವುದು ಈ ಜಂಟಿ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ವರದಿ ಹೇಳಿದೆ.

ಯೆಮೆನ್‌ನಲ್ಲಿ ಕಾರ್ಯಾಚರಣೆ ನಡೆಸುವುದು ಅಮೆರಿಕನ್ ಪಡೆಗಳ ಗುರಿಯಲ್ಲ, ಅಲ್ಲಿನ ಅಭಿವೃದ್ಧಿ ಮತ್ತು ಶಸ್ತ್ರಾಸ್ತ್ರ ನೀಡುವಿಕೆ ಕುರಿತು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ