ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರ ನಿಗ್ರಹದ ಬಗ್ಗೆ ಒಬಾಮಾ ಹೆಚ್ಚಿನ ನಿಗಾ ವಹಿಸಿಲ್ಲ: ಆಯೋಗ (Barack Obama | US | 9/11 commission | terror)
Bookmark and Share Feedback Print
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಆಡಳಿತದ ಮೊದಲ ವರ್ಷದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪೂರ್ಣ ಪ್ರಮಾಣದಲ್ಲಿ ಗಮನ ಹರಿಸಿಲ್ಲ ಎಂದು 9/11ರ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.

ನೈಜೀರಿಯಾದ ಶಂಕಿತ ಉಗ್ರ ಉಮರ್ ಫಾರೂಕ್ ಅಮೆರಿಕದ ವಿಮಾನವನ್ನು ಧ್ವಂಸಗೊಳಿಸಲು ವಿಫಲ ಯತ್ನ ನಡೆಸಿದ ಘಟನೆ ಅಮೆರಿಕದ ಭದ್ರತಾ ವ್ಯವಸ್ಥೆ ಕುರಿತು ಸಾಕಷ್ಟ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಹೇಳಿಕೆ ಹೊರಬಿದ್ದಿದೆ.

ಬರಾಕ್ ಅವರು ಆರೋಗ್ಯ, ಜಾಗತಿಕ ತಾಪಮಾನದ ಕುರಿತು ಒತ್ತು ನೀಡಿದರೆ ಹೊರತು, ಭಯೋತ್ಪಾದನೆ ನಿಗ್ರಹದ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿಲ್ಲ ಎಂಬುದು ನಮ್ಮ ಗ್ರಹಿಕೆ ಎಂದು 9/11ರ ಘಟನೆಯ ವಿಚಾರಣೆ ನಡೆಸಿದ ಆಯೋಗದ ಮಾಜಿ ಅಧ್ಯಕ್ಷ ಥೋಮಸ್ ಕೀನ್ ತಿಳಿಸಿದ್ದಾರೆ.

ಉಗ್ರಗಾಮಿ ಚಟುವಟಿಕೆ ಕುರಿತಂತೆ ನಾವು ಹೆಚ್ಚಿನ ಗಮನ ಹರಿಸಿಲ್ಲ ಎಂಬುದು ಸ್ಪಷ್ಟ, ಅದಕ್ಕೆ ಡಿಸೆಂಬರ್ 25ರಂದು ನಡೆಸಲು ಯತ್ನಿಸಿದ ಘಟನೆಯೇ ಸಾಕ್ಷಿ ಎಂದರು.
ಸಂಬಂಧಿತ ಮಾಹಿತಿ ಹುಡುಕಿ