ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೈಜೀರಿಯಾ ಕೋಮುಗಲಭೆಗೆ 326 ಬಲಿ: ಪೊಲೀಸ್ (Nigeria | religious violence | Jos | Christians)
Bookmark and Share Feedback Print
 
ಕೇಂದ್ರ ನೈಜೀರಿಯಾದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವಿನ ಧಾರ್ಮಿಕ ಸಂಘರ್ಷದಲ್ಲಿ 326 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪ್ಲಾಟೀವ್ ರಾಜ್ಯದ ಹಂಗಾಮಿ ಪೊಲೀಸ್ ಆಯುಕ್ತರಾಗಿರುವ ಇಕೆಚುಕ್ವು ಅಬೂಬಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಈ ರಾಜ್ಯದ ಜಾಸ್ ನಗರದಲ್ಲಿ ನಡೆದ ನಡೆದ ಹಿಂಸಾಚಾರಕ್ಕೆ 326 ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದ 303 ಮಂದಿಯನ್ನು ಬಂಧಿಸಲಾಗಿದೆ ಎಂದು ಎಂದರು.

ಕಳೆದೊಂದು ದಶಕದಲ್ಲಿ ಈ ಪ್ರಾಂತ್ಯದಲ್ಲಿ ನಡೆದ ಕೋಮುಗಲಭೆಗಳಿಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇತ್ತೀಚಿನ ಹಿಂಸಾಚಾರ ಕಳೆದ ವಾರ ಆರಂಭವಾಗಿತ್ತು. ಈ ಬಾರಿ 5,000ಕ್ಕೂ ಹೆಚ್ಚು ಮಂದಿ ಗಲಭೆಯಿಂದಾಗಿ ನಿರಾಶ್ರಿತರಾಗಿದ್ದರು ಎಂದು ವರದಿಗಳು ಹೇಳಿದ್ದವು.

ಈ ಸಂದರ್ಭದಲ್ಲಿ ನಗರದಲ್ಲಿ ಕರ್ಫ್ಯೂ ಹೇರಲಾಗಿದ್ದರೂ ಜನತೆ ಇದನ್ನು ಗಣನೆಗೆ ತೆಗೆದುಕೊಳ್ಳದೆ, ಸೇನಾ ವಾಹನಗಳನ್ನೇ ತಡೆದು ಇದು ತಮಗೊಂದು ಬೆದರಿಕೆಯೇ ಅಲ್ಲ ಎಂಬಂತೆ ಪ್ರತಿಭಟನಾಕಾರರು ವರ್ತಿಸಿದ್ದರು.

ಇಲ್ಲಿನ ಕ್ಯಾಥೋಲಿಕ್ ಚರ್ಚ್ ಒಂದಕ್ಕೆ ಮುಸ್ಲಿಂ ಯುವಕರು ಬೆಂಕಿ ಹಚ್ಚುವುವದರೊಂದಿಗೆ ಹಿಂಸಾಚಾರ ಆರಂಭವಾಗಿತ್ತು. ಗಲಭೆಕೋರರು ಕತ್ತಿಗಳು, ಗೃಹನಿರ್ಮಿತ ಸ್ಫೋಟಕಗಳು, ಬಾಣಗಳಂತಹ ಕಬ್ಬಿಣದ ಸಲಾಕೆಗಳು ಮತ್ತು ಕಲ್ಲುಗಳಿಂದ ದಾರಿಹೋಕರಿಗೆ ಹಲ್ಲೆ ನಡೆಸುತ್ತಿದ್ದರು ಎಂದು ವರದಿಗಳು ಹೇಳಿದ್ದವು.

ಜಾಸ್ ನಗರದಲ್ಲಿ ಈ ರೀತಿ ಕೋಮುಗಲಭೆಗಳು ಇದೇ ಮೊದಲಲ್ಲ. ಈ ಹಿಂದೆ 2001ರ ಸೆಪ್ಟೆಂಬರ್‌ನಲ್ಲಿ 1,000, ಮೂರು ವರ್ಷಗಳ ನಂತರ 2004ರಲ್ಲಿ 700 ಹಾಗೂ 2008ರಲ್ಲಿ 300ಕ್ಕೂ ಹೆಚ್ಚು ಜನ ಕೋಮು ಹಿಂಸೆಗೆ ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ