ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ: ಮುಜಿಬುರ್ ಹಂತಕರ ಗಲ್ಲುಶಿಕ್ಷೆ ಎತ್ತಿಹಿಡಿದ ಸುಪ್ರೀಂ (Bangladesh | Mujibur Rahman | Supreme Court | Dhaka)
Bookmark and Share Feedback Print
 
ಬಾಂಗ್ಲಾ ಸಂಸ್ಥಾಪಕ ಮುಜಿಬುರ್ ರೆಹಮಾನ್ ಮತ್ತು ಕುಟುಂಬಿಕರ ಹತ್ಯೆ ಪ್ರಕರಣದ ಐದು ಮಂದಿ ಆರೋಪಿಗಳು ತಮಗೆ ವಿಧಿಸಿದ್ದ ಮರಣದಂಡನೆಯನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್‌‌ಗೆ ಸಲ್ಲಿಸಿದ್ದ ಮನವಿಯನ್ನು ಬುಧವಾರ ತಿರಸ್ಕರಿಸಿದ್ದು, ತೀರ್ಪನ್ನು ಎತ್ತಿ ಹಿಡಿದಿದೆ.

ಬಾಂಗ್ಲಾ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಮೊಹಮ್ಮದ್ ತಫಾಜ್ಜುಲ್ ಇಸ್ಲಾಮ್ ಅವರ ನೇತೃತ್ವದ ಪೀಠ, ಮುಜಿಬುರ್ ಹತ್ಯೆ ಕುರಿತಂತೆ ಸತತ ಮೂರು ದಿನಗಳ ಕಾಲ ನಡೆದ ವಿಚಾರಣೆಯ ನಂತರ ಆರೋಪಿಗಳಿಗೆ ವಿಧಿಸಿದ್ದ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿದೆ.

ಬಾಂಗ್ಲಾದ ಸಂಸ್ಥಾಪಕ ಮುಜಿಬುರ್ ರೆಹಮಾನ್ ಅವರ ಹತ್ಯೆ ಪ್ರಕರಣದ 12ಮಂದಿ ಆರೋಪಿಗಳಲ್ಲಿ ಐದು ಮಂದಿ ಗಲ್ಲು ಶಿಕ್ಷೆಗೆ ಒಳಗಾಗಿದ್ದು, ಇದೀಗ ಜೈಲಿನಲ್ಲಿರುವ ಐದು ತಮಗೆ ವಿಧಿಸಿದ್ದ ಮರಣದಂಡನೆ ಕುರಿತು ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಮನವಿ ವಜಾಗೊಂಡಿದೆ.

ಮಿಲಿಟರಿಯಿಂದ ವಜಾಗೊಳಿಸಲ್ಪಟ್ಟ ಕರ್ನಲ್ ಸೈಯದ್ ಪಾರೂಕ್ ರಹಮಾನ್, ಸುಲ್ತಾನ್ ಶಾರಿಯರ್ ರಶೀದ್ ಖಾನ್, ಮೊಹಿಯುದ್ದೀನ್ ಅಹ್ಮದ್ ಮತ್ತು, ಎಕೆಎಂ ಮೊಹಿಯುದ್ದೀನ್, ಮೇಜರ್ ಬಾಜ್ಲ್‌ಲುಲ್ ಹುಡಾ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ