ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ; ಕಸಬ್ ಹೇಳಿಕೆಯನ್ನು ಸಮರ್ಥಿಸಿದ್ದ ಪಾಕ್ (Pakistan | Ajmal Kasab | Mumbai attack | Zakiur Rehman Lakhvi)
Bookmark and Share Feedback Print
 
ಮುಂಬೈ ದಾಳಿಯಲ್ಲಿ ಪಾಲ್ಗೊಂಡ ಬಹುತೇಕ ಉಗ್ರರು ಲಷ್ಕರ್ ಇ ತೋಯ್ಬಾಕ್ಕೆ ಸೇರಿದವರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳುವ ಮೂಲಕ ಪಾಕಿಸ್ತಾನಿ ತನಿಖಾದಳಗಳು ಮುಂಬೈ ದಾಳಿಯಲ್ಲಿ ಪಾಲ್ಗೊಂಡು ಬದುಕುಳಿದ ಏಕೈಕ ಉಗ್ರ ಅಜ್ಮಲ್ ಕಸಬ್ ಹೇಳಿಕೆಗಳನ್ನು ಸಮರ್ಥಿಸಿಕೊಂಡಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಲಷ್ಕರ್ ಇ ತೋಯ್ಬಾ ಕಾರ್ಯಾಚರಣೆಯ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಆರೋಪಿಗಳ ವಿಚಾರಣೆ ನಡೆಸುತ್ತಿರುವ ಉಗ್ರ ನಿಗ್ರಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ವರದಿಯಲ್ಲಿ ಇದನ್ನು ವಿವರಿಸಲಾಗಿದ್ದು, ಮುಂಬೈ ದಾಳಿಯಲ್ಲಿನ ಕೈವಾಡದ ಆರೋಪ ಹೊತ್ತಿರುವ ಇವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ.

ಮುಂಬೈ ದಾಳಿಯಲ್ಲಿ ಬದುಕುಳಿದ ಏಕೈಕ ದಾಳಿಕೋರ ಅಜ್ಮಲ್ ಅಮೀರ್ ಕಸಬ್ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಬೇಕಾದಷ್ಟು ಪುರಾವೆಗಳನ್ನು ನಾವು ಸಂಗ್ರಹಿಸಿದ್ದೇವೆ ಎಂದೂ ಪಾಕಿಸ್ತಾನದ ತನಿಖಾದಳಗಳು ವರದಿಯಲ್ಲಿ ನಮೂದಿಸಿವೆ.

2008ರ ನವೆಂಬರ್‌ನಲ್ಲಿ ನಡೆದ ದಾಳಿಯಲ್ಲಿ ಪಾಲ್ಗೊಂಡ ಆರೋಪಿಗಳೆಲ್ಲರೂ ಬಹುತೇಕ ಲಷ್ಕರ್ ಇ ತೋಯ್ಬಾ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಪಾಕಿಸ್ತಾನದ ಅಭಿಯೋಜಕರು ಮತ್ತು ತನಿಖೆದಾರರು ಒತ್ತಿ ಹೇಳಿದ್ದರು ಎಂದು ಡಾನ್ ನ್ಯೂಸ್ ತನ್ನ ವರದಿಯಲ್ಲಿ ಹೇಳಿದೆ.

ವರದಿಯ ಒಂದು ಪ್ರತಿಯನ್ನು ಪಡೆದುಕೊಂಡು ಅದನ್ನು ಉಲ್ಲೇಖಿಸಿರುವ ಈ ವಾರ್ತಾವಾಹಿನಿ, ಫೆಡರಲ್ ತನಿಖಾ ಏಜೆನ್ಸಿಯ ವಿಶೇಷ ತನಿಖಾ ತಂಡದ ನಿರ್ದೇಶಕರು ಮುಖ್ಯಸ್ಥರಾಗಿರುವ ಜಂಟಿ ತನಿಖಾ ತಂಡವು ವಿಚಾರಣೆ ಸಂದರ್ಭದಲ್ಲಿ ಈ ಪ್ರಮುಖ ಸಾಕ್ಷ್ಯಗಳನ್ನು ಕಲೆ ಹಾಕಿದೆ ಎಂದು ತಿಳಿಸಿದೆ.

ತಜ್ಞರು ತಯಾರಿಸಿರುವ 61 ಪುಟಗಳ ಈ ಸುದೀರ್ಘ ವರದಿಯನ್ನು ಕಳೆದ ವರ್ಷದ ಜುಲೈ ತಿಂಗಳಲ್ಲಿ ರಾವಲ್ಪಿಂಟಿ ಉಗ್ರ ನಿಗ್ರಹ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.

ಭಾರತವು ಹಸ್ತಾಂತರಿಸಿದ ಮಾಹಿತಿ ಮತ್ತು ಸಾಕ್ಷ್ಯಗಳೂ ಸೇರಿದಂತೆ 150ಕ್ಕೂ ಹೆಚ್ಚು ದಾಖಲೆಗಳು ಮತ್ತು ಸಾಕ್ಷ್ಯ ವಸ್ತುಗಳನ್ನು ಆಪಾದಿತರ ಭಾವಚಿತ್ರಗಳ ಜತೆ ಸೇರಿಸಿ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ