ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಭಾರತೀಯನ ಹತ್ಯೆ-ದಂಪತಿಗಳ ಸೆರೆ (India | Australia | Race Attacks | Sydney | Ranjodh Singh)
Bookmark and Share Feedback Print
 
ಭಾರತದ ರಣ್‌ಜೋಧ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳಿಬ್ಬರನ್ನು ಆಸ್ಟ್ರೇಲಿಯಾ ಪೊಲೀಸರು ಗುರುವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಭಾರತ ಮೂಲದ ಸಿಂಗ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ 23ರ ಹರೆಯದ ವ್ಯಕ್ತಿ ಮತ್ತು 20ರ ಹರೆಯದ ಆತನ ಪತ್ನಿಯನ್ನು ಸಿಡ್ನಿಯ ಸ್ಯಾನ್ಸ್ ಸೌಸಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಣ್‌ಜೋಧ್ ಸಿಂಗ್ ದಂಪತಿಗಳಿಬ್ಬರು ಅಥವಾ ಅವರ ನಿಕಟವರ್ತಿಗಳಿಂದ ಅಲ್ಪ ಪ್ರಮಾಣದ ಹಣವನ್ನು ಪಡೆದಿದ್ದು, ಈ ಕಾರಣಕ್ಕಾಗಿಯೇ ಅವರ ನಡುವೆ ಜಗಳ ನಡೆದಿತ್ತು. ಆದರೆ ಸಿಂಗ್ ಅವರ ಕೊಲೆ ಪಾರ್ಟಿಯೊಂದರಲ್ಲಿ ನಡೆದಿರುವುದಾಗಿ ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಜನಾಂಗೀಯ ದ್ವೇಷದಲ್ಲಿ ನಡೆದ ಕೊಲೆ ಅಲ್ಲ ಎಂಬುದು ನನ್ನ ಊಹೆ. ಈ ಬಗ್ಗೆ ಸರಿಯಾಗಿ ಯಾವುದೇ ಮಾಹಿತಿ ಇಲ್ಲ. ಇದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಬಂಧಿತ ದಂಪತಿಗಳು ಭಾರತೀಯ ಮೂಲಕ್ಕೆ ಸೇರಿದವರು ಎಂದು ದಕ್ಷಿಣ ಏಷ್ಯಾ ಟೈಮ್ಸ್ ಸಂಪಾದಕ ನೀರಜ್ ನಂದಾ ಅವರು ಸಿಎನ್‌ಎನ್-ಐಬಿಎನ್‌ಗೆ ವಿವರಿಸಿದ್ದಾರೆ.

ರಣ್‌ಜೋಧ್ ಅವರ ಅರೆಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹ 2009ರ ಡಿಸೆಂಬರ್ 29ರಂದು ಆಸ್ಟ್ರೇಲಿಯಾದ ಗ್ರಿಫ್ತ್ ನಗರದ ರಸ್ತೆ ಸಮೀಪ ಪತ್ತೆಯಾಗಿತ್ತು. ಸಿಂಗ್ ಅವರ ಗಂಟಲು ಸೀಳಿ, ದೇಹದ ಹಲವೆಡೆ ಇರಿದು ಹತ್ಯೆಗೈಯಲಾಗಿತ್ತು ಎಂಬ ವಿವರ ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಹಿರಂಗಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ