ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಮತ್ತೆ ನಾಲ್ವರು ಭಾರತೀಯರ ಮೇಲೆ ಹಲ್ಲೆ (India | Australia | Brisbane | attacks | Queensland)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ದಾಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಭಾರತದ ಎಚ್ಚರಿಕೆಯ ನಡುವೆಯೇ, ಬ್ರಿಸ್ಬೇನ್ ಮತ್ತು ಕ್ವೀನ್ಸ್ ಲ್ಯಾಂಡ್‌ನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಭಾರತೀಯರ ಮೇಲೆ ಹಲ್ಲೆ ನಡೆಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ಮತ್ತು ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಾಲ್ವರು ಭಾರತೀಯರ ಮೇಲೆ ದಾಳಿ ನಡೆಸಿರುವುದಾಗಿ ಸ್ಕೈ ನ್ಯೂಸ್ ವರದಿ ತಿಳಿಸಿದ್ದು, ದಾಳಿಗೆ ಒಳಗಾದವರ ಕುರಿತು ಯಾವುದೇ ಹೆಚ್ಚಿನ ವಿವರವನ್ನು ನೀಡಿಲ್ಲ.

ಹಲ್ಲೆಗೆ ಒಳಗಾದವರಲ್ಲಿ ಮೂರು ಮಂದಿ ಕ್ಯಾಬ್ ಡ್ರೈವರ್ ಎಂದು ವರದಿ ಹೇಳಿದೆ. ಆಸ್ಟ್ರೇಲಿಯಾದಲ್ಲಿ ಸುಮಾರು ಶೇ.70ರಷ್ಟು ಭಾರತೀಯರು ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದು, ಭಾರತೀಯರ ಮೇಲೆ ನಡೆಯುತ್ತಿರುವ ದಾಳಿ ಕುರಿತು ಹೆಚ್ಚಿನ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ದಾಳಿಗೊಳಗಾದವರಲ್ಲಿ ಒಬ್ಬ ತಿಳಿಸಿದ್ದಾನೆ.

ಇದೀಗ ನಡೆದ ಹೊಸ ದಾಳಿಯೊಂದಿಗೆ ಪ್ರಸಕ್ತ ತಿಂಗಳಿನಲ್ಲಿ ನಡೆದ 10ನೇ ಪ್ರಕರಣ ಇದಾಗಿದೆ. ಬ್ರಿಸ್ಬೇನ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ 23ರ ಹರೆಯದ ಪಿಜ್ಜಾ ಸರಬರಾಜುದಾರ ಯುವಕನ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿ, ಹಣವನ್ನು ದೋಚಿರುವುದಾಗಿ ವರದಿ ವಿವರಿಸಿದೆ.

2009ರಲ್ಲಿ ಆಸ್ಟ್ರೇಲಿಯಾದಲ್ಲಿ ಸುಮಾರು 100 ದಾಳಿ ನಡೆದಿತ್ತು. ಅದರಲ್ಲೂ ಮುಖ್ಯವಾಗಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಹಲ್ಲೆ ನಡೆಸಲಾಗಿತ್ತು. ಅದೇ ರೀತಿ ಪ್ರಸಕ್ತ ಸಾಲಿನಲ್ಲೂ ಭಾರತೀಯರ ಮೇಲಿನ ದಾಳಿ ಮುಂದುವರಿದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ