ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈಯಂತಹ ನೂರೊಂದು ಘಟನೆಗಳು ನಮ್ಮಲ್ಲಿ ನಡೆದಿವೆ: ಪಾಕ್ (Pakistan | Mumbai-like incidents | terrorism | Yusuf Raza Gilani)
Bookmark and Share Feedback Print
 
ಮುಂಬೈಯಂತಹ 101 ಭಯೋತ್ಪಾದನಾ ದಾಳಿಗಳನ್ನು ಕಂಡಿರುವ ಪಾಕಿಸ್ತಾನವೂ ಭಯೋತ್ಪಾದನೆಯ ಬಲಿಪಶು ಎಂದಿರುವ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಮಾತುಕತೆ ಪುನರಾರಂಭಿಸುವಂತೆ ಭಾರತಕ್ಕೆ ಕರೆ ನೀಡಿದರಲ್ಲದೆ ಯುದ್ಧ ನಡೆಸಲು ಉಭಯ ದೇಶಗಳು ಸಮರ್ಥವಲ್ಲ ಎಂದು ಹೇಳಿದ್ದಾರೆ.

ಮುಂಬೈಯಲ್ಲಿ ದಾಳಿ ನಡೆದ ನಂತರ ಅಂತಹ 101 ಘಟನೆಗಳು ಪಾಕಿಸ್ತಾನದಲ್ಲಿ ನಡೆದಿವೆ. ಎರಡೂ ಜವಾಬ್ದಾರಿಯುತ ರಾಷ್ಟ್ರಗಳಾಗಿರುವ ಕಾರಣ ನಮ್ಮ ಸಮಸ್ಯೆಗಳಿಗೆ ಮಾತುಕತೆಯೇ ಉತ್ತರ. ನಾವು ಮುಂದಕ್ಕೆ ನಡೆಯುವುದು ಮಾತ್ರ ಸಾಧ್ಯ. ಯುದ್ಧವನ್ನು ಭರಿಸುವುದು ಕೂಡ ಕಷ್ಟ. ಇದಕ್ಕಿರುವ ಒಂದೇ ಒಂದು ಮಾರ್ಗವೆಂದರೆ ಮಾತುಕತೆ ಎಂದು ಗುರುವಾರ ಪ್ರಸಾರವಾಗುವ ಟೀವಿ ಸಂದರ್ಶನವೊಂದರಲ್ಲಿ ಗಿಲಾನಿ ಹೇಳಿದ್ದಾರೆ.

2008ರ ನವೆಂಬರ್‌ನಲ್ಲಿನ ಮುಂಬೈ ದಾಳಿ ಬಳಿಕ ಇದಕ್ಕೆ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿ ಭಾರತ ಸರಕಾರವು ಪಾಕಿಸ್ತಾನದ ಜತೆಗಿನ ಎಲ್ಲಾ ಮಾತುಕತೆಗಳನ್ನು ನಿಲ್ಲಿಸಿದೆ.

ಈಜಿಪ್ಟ್‌ನಲ್ಲಿನ ಶರ್ಮ್ ಇ ಶೇಖ್‌ನಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಜತೆ ನಡೆದ ಮಾತುಕತೆಯನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿರುವ ಗಿಲಾನಿ, ಇದು ಯಶಸ್ವಿ ಮಾತುಕತೆಯಾಗಿತ್ತು; ನಾವು ಎಲ್ಲಾ ವಿಚಾರಗಳ ಕುರಿತೂ ಚರ್ಚೆ ನಡೆಸಿದ್ದೆವು. ಎರಡೂ ದೇಶಗಳು ಭಯೋತ್ಪಾದನೆಯಿಂದ ನಲುಗುತ್ತಿರುವ ರಾಷ್ಟ್ರಗಳೆಂದು ನಾವು ಆ ಸಂದರ್ಭದಲ್ಲಿ ಅರ್ಥ ಮಾಡಿಕೊಂಡಿದ್ದೆವು ಎಂದರು.

ಕೇವಲ ಒಂದು ಘಟನೆಗಾಗಿ 1.25 ಬಿಲಿಯನ್ ಜನರನ್ನು ಬಲಿಪಶುಗಳನ್ನಾಗಿ ಮಾಡುವುದು ಸರಿಯಲ್ಲ ಎಂದೂ ಇದೇ ಸಂದರ್ಭದಲ್ಲಿ ಪಾಕಿಸ್ತಾನಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಖಂಡಿತಾ ನಾವು ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ ಪಾಕಿಸ್ತಾನ ಅಥವಾ ಭಾರತದ ನೆಲ ಪರಸ್ಪರ ಭಯೋತ್ಪಾದನೆ ಯೋಜನೆಗಳಿಗೆ ಬಳಕೆಯಾಗಬಾರದು ಎಂಬುದರಲ್ಲಿ ನಂಬಿಕೆ ಹೊಂದಿದ್ದೇವೆ. ನಾವು ಭಯೋತ್ಪಾದನೆಯ ಬಲಿಪಶುಗಳು. ನಾವು ಇದರ ವಿರುದ್ಧ ಯಾವ ರೀತಿಯಲ್ಲಿ ಹೋರಾಡುತ್ತಿದ್ದೇವೆ ಎಂಬುದು ನಿಮಗೇ ಗೊತ್ತಿದೆ ಎಂದು ಗಿಲಾನಿ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ