ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೋತ ಫೊನ್ಸೇಕಾ ಭದ್ರತೆ ವಾಪಸ್ ಪಡೆದ ಶ್ರೀಲಂಕಾ (Sri Lanka | presidential candidate | General Sarath Fonseka | military)
Bookmark and Share Feedback Print
 
ಶ್ರೀಲಂಕಾ ಪರಾಜಿತ ಅಧ್ಯಕ್ಷೀಯ ಅಭ್ಯರ್ಥಿ ಜನರಲ್ ಸರತ್ ಫೊನ್ಸೇಕಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಿಲಿಟರಿ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಫೊನ್ಸೇಕಾ ಅವರ ಭದ್ರತೆಗಾಗಿ ನೀಡಲಾಗಿದ್ದ ಒಂದು ಗುಂಡು ನಿರೋಧಕ ಕಾರು ಸಹಿತ ನಾಲ್ಕು ಭದ್ರತಾ ವಾಹನಗಳು, 20 ಮಿಲಿಟರಿ ಯೋಧರನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬ್ರಿಗೇಡಿಯರ್ ಉದಯ ನಾನಯಕ್ಕರ ತಿಳಿಸಿದ್ದಾರೆ.

ಆದರೆ ಮಾಜಿ ಮಿಲಿಟರಿ ಮುಖ್ಯಸ್ಥ ಎಂಬ ನೆಲೆಯಲ್ಲಿ ಅವರಿಗೆ ನೀಡಲಾಗುವ ಇತರ ಭದ್ರತಾ ವ್ಯವಸ್ಥೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಮಿಲಿಟರಿ ವಕ್ತಾರರು ನಿರಾಕರಿಸಿದರು.

ಮಂಗಳವಾರ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಇದರಲ್ಲಿ ಶೇ.57.88 ಮತಗಳನ್ನು ಪಡೆದ ಹಾಲಿ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆಯವರು ಮರು ಆಯ್ಕೆಗೊಳ್ಳುವ ಮೂಲಕ ಫೊನ್ಸೇಕಾ ಪರಾಜಯ ಅನುಭವಿಸಿದ್ದರು.

ಅದೇ ಹೊತ್ತಿಗೆ ಫಲಿತಾಂಶಗಳನ್ನು ತಿರುಚಲಾಗಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ಅಭ್ಯರ್ಥಿ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಅಲ್ಲದೆ ದೇಶದ ಮಾಧ್ಯಮಗಳನ್ನು ಅಧ್ಯಕ್ಷರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಫೊನ್ಸೇಕಾ, ಅಧಿಕಾರಿಗಳು, ಸರಕಾರಿ ವಾಹನಗಳು ಮತ್ತು ಸರಕಾರಿ ಕಟ್ಟಡಗಳನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಮಿಲಿಟರಿಯು ಫೊನ್ಸೇಕಾ ಅವರು ತಂಗಿದ್ದ ಹೊಟೇಲನ್ನು ಸುತ್ತುವರಿದಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸರಕಾರ, ಅವರನ್ನು ಬಂಧಿಸಲು ಯತ್ನ ನಡೆಸಲಾಗಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದೆ.

ಈ ಸಂದರ್ಭದಲ್ಲಿ ತನ್ನನ್ನು ಮಿಲಿಟರಿ ಕೊಂದೇ ಹಾಕುತ್ತದೆ ಎಂದು ಅಲವತ್ತುಕೊಂಡಿದ್ದ ಫೊನ್ಸೇಕಾ, ಸಂಜೆ ಹೊತ್ತಿಗೆ ಹೊಟೇಲಿನಿಂದ ಸುರಕ್ಷಿತವಾಗಿ ಹೊರಗೆ ಹೋಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ