ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಹತ್ರ ಬರ್ತಿದೆ, ನಾವು ಸೆಕಂಡ್ ಆಗಲ್ಲ: ಒಬಾಮಾ (India | China | United States | Barack Obama)
Bookmark and Share Feedback Print
 
ಅಮೆರಿಕಾ ಎರಡನೇ ಸ್ಥಾನಕ್ಕೆ ತಳ್ಳಲ್ಪಡುವುದನ್ನು ನೋಡಲು ತಾನು ಇಚ್ಛಿಸುವುದಿಲ್ಲ ಎಂದಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಭಾರತ, ಚೀನಾ ಮತ್ತು ಜರ್ಮನಿಗಳು ನಮ್ಮನ್ನು ಹಿಂದಕ್ಕೆ ತಳ್ಳುವ ಮೊದಲು ನಮ್ಮ ಪ್ರಗತಿಗೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದಿದ್ದಾರೆ.

ನಮ್ಮೆದುರು ಇರುವ ಬೃಹತ್ ಸವಾಲುಗಳೂ ನನ್ನ ಮಹತ್ವಾಕಾಂಕ್ಷೆಯಾಗಿದ್ದು, ಅವುಗಳೆಗಿನ ಪ್ರಯತ್ನಗಳು ಮುಂದುವರಿಯಲಿವೆ ಎಂದು ನಾನು ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ರಾಜಕೀಯ ವ್ಯವಸ್ಥೆಯೂ ಅತೀ ಕ್ಲಿಷ್ಟಕರವಾಗಿರುವುದರಿಂದ ನಾವು ಈ ವಿಚಾರಗಳನ್ನು ಸ್ವಲ್ಪ ಕಾಲ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಬುಧವಾರ ಮಾತನಾಡುತ್ತಾ ತಿಳಿಸಿದ್ದಾರೆ.

ಇಂತಹ ಪ್ರಶ್ನೆಗಳನ್ನು ಎತ್ತುವವರಿಗೆಲ್ಲ ನನ್ನದೊಂದು ಪ್ರಶ್ನೆಯಿದೆ: ನಾವು ಎಷ್ಟು ಕಾಲ ಕಾಯಲು ಸಾಧ್ಯ? ಎಷ್ಟು ಕಾಲ ಅಮೆರಿಕಾ ಭವಿಷ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯ ಎಂದು ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಒಬಾಮಾ ಪ್ರಶ್ನಿಸಿದರು.

ಸಮಸ್ಯೆಗಳು ತೀರಾ ಹೆಚ್ಚಾಗಿದ್ದರೂ ಕಳೆದೊಂದು ದಶಕದಿಂದ ನಮ್ಮನ್ನು ಕಾಯುವಂತೆ ವಾಷಿಂಗ್ಟನ್ ಹೇಳುತ್ತಾ ಬರುತ್ತಿದೆ. ಅದೇ ಹೊತ್ತಿಗೆ ತನ್ನ ಅರ್ಥವ್ಯವಸ್ಥೆಯನ್ನು ಪ್ರಗತಿಗೊಪ್ಪಿಸಿರುವ ಚೀನಾ ಕಾಯುತ್ತಿಲ್ಲ, ಜರ್ಮನಿಯೂ ಕಾಯುತ್ತಿಲ್ಲ. ಅಷ್ಟೇ ಏಕೆ ಭಾರತವೂ ಕಾಯುತ್ತಿಲ್ಲ ಎಂದರು.

ಆ ದೇಶಗಳು ಹಿಂದೆ ಇದ್ದ ಹಾಗೆ ಈಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿವೆ. ಇಲ್ಲಿ ಹೇಳಿದ ಯಾವ ರಾಷ್ಟ್ರಗಳೂ ಎರಡನೇ ಸ್ಥಾನಕ್ಕಾಗಿ ಹೋರಾಡುತ್ತಿಲ್ಲ. ಅವರು ಗಣಿತ ಮತ್ತು ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ತಮ್ಮ ಮೂಲಭೂತ ವ್ಯವಸ್ಥೆಗಳನ್ನು ಅವರು ಮರು ನಿರ್ಮಾಣ ಮಾಡುತ್ತಿದ್ದಾರೆ. ಅವರು ತಮ್ಮ ಸಾಮರ್ಥ್ಯದಂತೆ ಗಂಭೀರ ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಯಾಕೆಂದರೆ ಅವರಿಗೆ ಉದ್ಯೋಗ ಬೇಕಾಗಿದೆ ಎಂದು ಅಮೆರಿಕಾ ಅಧ್ಯಕ್ಷ ವಿವರಣೆ ನೀಡಿದರು.

ಆದರೂ ನಾನು ಅಮೆರಿಕಾಕ್ಕೆ ಎರಡನೇ ಸ್ಥಾನ ಸಿಗುವುದನ್ನು ಒಪ್ಪಿಕೊಳ್ಳಲಾರೆ. ಅದಕ್ಕೆ ನಾನು ಸಿದ್ಧನಿಲ್ಲ. ಹಾಗಾಗಿ ನಮ್ಮ ಪ್ರಗತಿಯಲ್ಲಿ ತೊಡಕಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಗಂಭೀರ ಹೆಜ್ಜೆಗಳನ್ನಿಡಲು ಇದು ಸರಿಯಾದ ಕಾಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ