ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗೊಂದಲದಲ್ಲಿರುವ ಭಾರತದಿಂದ ಬೂಟಾಟಿಕೆ: ಪಾಕ್ ಆರೋಪ (India | SM Qureshi | India | SM Krishna)
Bookmark and Share Feedback Print
 
ಪಾಕಿಸ್ತಾನದ ಕಡೆಗಿನ ಭಾರತದ ಆಡಳಿತ ವ್ಯವಸ್ಥೆಯ ಮನೋಭಾವವು ಗೊಂದಲದಿಂದ ಕೂಡಿದ್ದು, ಬೂಟಾಟಿಕೆ ಮೆರೆಯುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಆರೋಪಿಸಿದ್ದಾರೆ.

ತಾನು ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಮಹಾ ಅಧಿವೇಶನದ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ನಾನು 'ಹೊಸ ಪ್ರಸ್ತಾವನೆ ಮತ್ತು ಪರಿಹಾರ ಸೂತ್ರ'ವೊಂದನ್ನು ನೀಡಿದ್ದೆ, ಆದರೆ ಅವರು ಇದುವರೆಗೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.

ಅವರು ನಮ್ಮ ಕಡೆ ಯಾವುದೇ ಒಲವು ಹೊಂದಿಲ್ಲ ಎಂಬುದು ಇದರ ಇದರರ್ಥ ಎಂದು ಅಫಘಾನಿಸ್ತಾನದ ಕುರಿತು ಲಂಡನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದ ಕೊನೆಯ ದಿನ ಪತ್ರಕರ್ತರೊಂದಿಗೆ ಮಾತನಾಡುತ್ತಾ ತನ್ನ ಅಸಮಾಧಾನವನ್ನು ತೋಡಿಕೊಂಡರು.

ಪಾಕಿಸ್ತಾನದ ಜತೆ ಸೇರಿಕೊಳ್ಳಬೇಕೋ ಅಥವಾ ಮತ್ತೊಬ್ಬರಿಗೆ ನೋವಾಗುವಂತೆ ದೂರ ಉಳಿಯಬೇಕೋ ಎಂಬುದರ ಕುರಿತು ಭಾರತವು ತೀರಾ ಗೊಂದಲದಲ್ಲಿದೆ ಎಂದರು.

ಭಾರತೀಯ ವಿದೇಶಾಂಗ ಸಚಿವಾಲಯವು ಸ್ವೀಕರಿಸಿರುವ ಸಾರ್ವಜನಿಕ ನಿಲುವು ವೈಯಕ್ತಿಕ ನಿಲುವಿಗಿಂತ ಭಿನ್ನವಾಗಿದ್ದು, ಮುಂಬೈ ದಾಳಿಯ ನಂತರ ನಾವು ನೀಡಿದ ಅಭೂತಪೂರ್ವ ಸಹಕಾರವನ್ನು ಭಾರತ ಅಂಗೀಕರಿಸಿದೆ. ಆದರೆ ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಅವರು ತಯಾರಿಲ್ಲ ಎಂದು ಮತ್ತೊಂದು ಸುತ್ತಿನ ಟೀಕಾಪ್ರಹಾರವನ್ನು ಖುರೇಷಿ ನಡೆಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಪಾಕಿಸ್ತಾನಿ ಆಟಗಾರರನ್ನು ಕೈ ಬಿಟ್ಟಿರುವ ಭಾರತದ ನಿರ್ಧಾರವನ್ನು ಅವಿವೇಕತನದ್ದು ಎಂದಿರುವ ಖುರೇಷಿ, ನಮ್ಮ ಆಟಗಾರರನ್ನು ಸೇರಿಸಿಕೊಳ್ಳುತ್ತಿದ್ದರೆ ಅದರ ಅಂತಾರಾಷ್ಟ್ರೀಯ ಗೌರವ, ಗುಣಮಟ್ಟ ಉತ್ಕೃಷ್ಟವಾಗುತ್ತಿತ್ತು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ