ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿ ಸೇನಾ ನೆಲೆ; ಭಾರತವನ್ನು ಸುತ್ತುವರಿಯಲಿದೆ ಚೀನಾ (China | India | military base | Pakistan)
Bookmark and Share Feedback Print
 
ಭಾರತದ ಭದ್ರತಾ ವ್ಯವಸ್ಥೆಗೆ ಮೊದಲಿನಿಂದಲೂ ಬೆದರಿಕೆಗಳನ್ನೊಡ್ಡುತ್ತಾ ಬಂದಿರುವ ಚೀನಾವು ಮತ್ತೊಂದು ಸಾಹಸಕ್ಕೆ ಇಳಿದಿದ್ದು, ಭಾರತದ ಸುತ್ತಲಿನ ರಾಷ್ಟ್ರಗಳಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವ ಮುನ್ಸೂಚನೆ ನೀಡಿದೆ. ಅದರ ಮೊತ್ತ ಮೊದಲ ಹೆಜ್ಜೆಯಾಗಿ ಪಾಕಿಸ್ತಾನವನ್ನು ಚೀನಾ ಸರಕಾರ ಆರಿಸಿಕೊಳ್ಳಲಿದೆ ಎಂದು ವರದಿಗಳು ಹೇಳಿವೆ.

ದಕ್ಷಿಣ ಏಷಿಯಾದಲ್ಲಿ ಅಮೆರಿಕಾದ ಪ್ರಭಾವ ಹೆಚ್ಚುತ್ತಿರುವುದನ್ನೂ ಗಮನಕ್ಕೆ ತೆಗೆದುಕೊಂಡು ಕಳವಳಗೊಂಡಿರುವ ಚೀನಾ, ಅದೇ ಹಾದಿಯಲ್ಲಿ ಸಾಗುವ ಯತ್ನವಾಗಿ ಪಾಕಿಸ್ತಾನದಲ್ಲಿ ತನ್ನ ಮೊದಲ ಸೇನಾ ನೆಲೆಯನ್ನು ಸ್ಥಾಪಿಸಲಿದ್ದು, ಇದನ್ನು ಅಫಘಾನಿಸ್ತಾನಕ್ಕೂ ವಿಸ್ತರಿಸುವ ಮೂಲಕ ಭಾರತ ಮತ್ತು ಅಮೆರಿಕಾಗಳ ಶಕ್ತಿ ಕುಗ್ಗಿಸುವ ಯತ್ನ ನಡೆಸಲಿದೆ.

ವಿದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವ ಯೋಚನೆಯಿಂದ ನಾವು ಹೊರಗುಳಿದಿಲ್ಲ. ಅದು ನಮ್ಮ ಹಕ್ಕು, ನಾವು ಮುಂದಿನ ದಿನಗಳಲ್ಲಿ ವಿದೇಶಿ ನೆಲದಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುವುದಿಲ್ಲ ಮತ್ತು ಸೇನಾಪಡೆಗಳನ್ನು ಕಳುಹಿಸುವುದಿಲ್ಲ ಎಂಬುದು ಆಧಾರ ರಹಿತವಾದುದು ಎಂದು ಚೀನಾ ಸರಕಾರ ತನ್ನ ವೆಬ್‌ಸೈಟಿನಲ್ಲಿ ತಿಳಿಸಿದೆ.

ಪ್ರಸಕ್ತ ಚೀನಾವು ದೇಶದ ಹೊರಗಡೆ ಎಲ್ಲೂ ತನ್ನ ಸೇನಾ ನೆಲೆ ಹೊಂದಿಲ್ಲ. ಅಲ್ಲದೆ ಅಮೆರಿಕಾವು ಹಲವು ದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಹೊಂದಿರುವುದನ್ನು ಇದಕ್ಕೆ ಮುಂಚೆ ಆಗಾಗ ಚೀನಾ ಟೀಕಿಸುತ್ತಾ ಬಂದಿತ್ತು.

ಚೀನಾ ಸರಕಾರದ ವೆಬ್‌ಸೈಟೊಂದರಲ್ಲಿ ವಿದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗಿದ್ದು, ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಸೇನಾ ಸಂಬಂಧಗಳು ಭಾರತಕ್ಕೆ ಬೆದರಿಕೆ ಎಂದೇ ಪರಿಗಣಿಸಲಾಗುತ್ತಿದೆ. ದಕ್ಷಿಣ ಏಷಿಯಾ ಮತ್ತು ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವುದರ ಕುರಿತು ಭಾರತ ತೀವ್ರ ಕಳವಳ ಹೊಂದಿದೆ.

ಮಿಲಿಟರಿ ದೃಷ್ಟಿಯಿಂದ ನಾವು ನೋಡಿದಾಗ ದೇಶದೊಳಗಿನ ಅಥವಾ ಹೊರಗಿನ ಪಕ್ಕದ ಪ್ರಬಲ ರಾಷ್ಟ್ರಗಳ ವೈರಿಗಳಿಂದ ಎದುರಾಗುವ ದಾಳಿಯನ್ನು ನಾವು ಎದುರಿಸಲು ಸಮರ್ಥರಾಗಬೇಕು. ಅಲ್ಲದೆ ಪ್ರಬಲ ವೈರತ್ವದ ವಿದೇಶಿ ಹಿತಾಸಕ್ತಿಗಳ ಮೇಲೆ ನಾವು ಒತ್ತಡ ಹೇರುವುದು ಕೂಡ ಅಗತ್ಯವಿದೆ ಎಂದು ಚೀನಾದ ಸರಕಾರಿ ವೆಬ್‌ಸೈಟ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ