ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಜರ್ದಾರಿ ಪ್ರತಿದಿನ ಕಪ್ಪು ಆಡನ್ನು ಬಲಿಕೊಡ್ತಾರಂತೆ! (Islamabad | black goat | Pakistan | Asif Ali Zardari | Dawn)
Bookmark and Share Feedback Print
 
PTI
ಮಿಸ್ಟರ್ 10ಪರ್ಸೆಂಟ್ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ, ಇದೀಗ ತಮ್ಮ ಮೇಲೆ ಬಿದ್ದಿರುವ ವಕ್ರದೃಷ್ಟಿ ನಿವಾರಣೆಗಾಗಿ ದಿನಂಪ್ರತಿ 'ಕಪ್ಪು ಆಡ'ನ್ನು ಬಲಿಕೊಡುತ್ತಿದ್ದಾರೆಂದು ಡಾನ್ ಪತ್ರಿಕೆ ವರದಿ ತಿಳಿಸಿದೆ.

ಮೂಢನಂಬಿಕೆಯುಳ್ಳ ಜರ್ದಾರಿ ಪ್ರತಿದಿನ ಆಡು ಮತ್ತು ಒಂಟೆಯ ಹಾಲನ್ನೂ ಕುಡಿಯುತ್ತಾರಂತೆ. 2008ರ ಸೆಪ್ಟೆಂಬರ್‌ನಲ್ಲಿ ಜರ್ದಾರಿ ಅಧ್ಯಕ್ಷಗಾದಿ ಏರಿದ ನಂತರ ಸುಮಾರು ನೂರು ಆಡುಗಳನ್ನು ಬಲಿಕೊಟ್ಟಿರುವುದಾಗಿ ವರದಿ ವಿವರಿಸಿದೆ.

ಇಸ್ಲಾಮಾಬಾದ್‌ನ ಹೃದಯಭಾಗದ ಸೈದಪುರ್ ಗ್ರಾಮದಿಂದ ಜರ್ದಾರಿಯ ಆಪ್ತ ಸೇವಕ ಬಾಯ್ ಖಾನ್ ಪ್ರತಿದಿನ ಆಡುಗಳನ್ನು ಖರೀದಿಸಿ ತರುತ್ತಾನೆ. ಆ ನಂತರ ಜರ್ದಾರಿ ಅವರ ಖಾಸಗಿ ನಿವಾಸದಲ್ಲಿ ಆಡನ್ನು ಜರ್ದಾರಿ ಸ್ಪರ್ಶಿಸಿದ ನಂತರ ಅದರ ಬಲಿ ಕೊಡಲಾಗುತ್ತದೆ ಎಂದು ಹೇಳಿದೆ.

ಆದರೆ ಈ ವರದಿಯನ್ನು ತಳ್ಳಿಹಾಕಿರುವ ಅಧ್ಯಕ್ಷರ ಕಚೇರಿ ವಕ್ತಾರ ಬಾಬರ್, ಜರ್ದಾರಿ ಮೂಢನಂಬಿಕೆಯುಳ್ಳ ವ್ಯಕ್ತಿಯಲ್ಲ. ಅವರು ಸಾದಕ್ ಚಾರ್ಟಿಗಾಗಿ ಬಹುದಿನಗಳಿಂದ ಈ ಪದ್ಧತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆಂದು ಸಮಜಾಯಿಷಿ ನೀಡಿದ್ದಾರೆ.

ಈಗಾಗಲೇ ಕ್ಷಮಾದಾನ ಸುಗ್ರೀವಾಜ್ಞೆಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ತಿರಸ್ಕೃತಗೊಳಿಸಿದ ನಂತರ ಅಧ್ಯಕ್ಷ ಜರ್ದಾರಿ ಒಂದರ ಮೇಲೊಂದರಂತೆ ಅಧಿಕಾರದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ