ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 48 ಮಿ. ಅಮೆರಿಕನ್ ಪ್ರಜೆಗಳಿಂದ ಒಬಾಮ ಭಾಷಣ ವೀಕ್ಷಣೆ! (America | Obama | India | Clinton)
Bookmark and Share Feedback Print
 
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಗುರುವಾರ ಸೆನೆಟ್ ಉದ್ದೇಶಿಸಿ ಸಾಂಪ್ರದಾಯಿಕ ಭಾಷಣವನ್ನು ಸುಮಾರು 48ಮಿಲಿಯನ್ ಅಮೆರಿಕನ್ ಪ್ರಜೆಗಳು ವೀಕ್ಷಿಸಿದ್ದಾರೆ ಎಂದು ನೆಯಿಲ್‌ಸೆನ್ ಅಂಕಿಅಂಶ ತೋರಿಸಿದೆ.

ಗುರುವಾರ ಒಬಾಮ ಅವರು ಮಾಡಿದ ಭಾಷಣದಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗದಿಂದಾಗಿ ಅಮೆರಿಕದಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಹಾಗೂ ಅದನ್ನು ಕೊನೆಗೊಳಿಸಲು ತಾವು ಪಣತೊಟ್ಟಿರುವುದಾಗಿಯೂ ಹೇಳಿದ್ದರು. ಒಬಾಮ ಅವರ ಭಾಷಣದುದ್ದಕ್ಕೂ ನಿರ್ಧಾರಗಳನ್ನು ಚಪ್ಪಾಳೆಗಳಿಂದ ಮುಕ್ತಕಂಠದಿಂದ ಸ್ವಾಗತಿಸಿದ್ದರು.

ಅಲ್ಲದೇ, ಹೊರಗುತ್ತಿಗೆ ನೀಡುತ್ತಿರುವ ಕಂಪನಿಗಳಿಗೆ ನೀಡಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕಡಿತಗೊಳಿಸಿ ಆ ಸೌಲಭ್ಯವನ್ನು ಸ್ಥಳೀಯವಾಗಿ ಉದ್ಯೋಗ ಅವಕಾಶವನ್ನು ಸೃಷ್ಟಿಸುವ ಸಂಸ್ಥೆಗಳಿಗೆ ನೀಡುವುದಾಗಿ ಹೇಳಿದ್ದರು.

1993ರಲ್ಲಿ ಕ್ಲಿಂಟನ್ ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣವನ್ನು 66.9ಮಿಲಿಯನ್ ಪ್ರಜೆಗಳು ವೀಕ್ಷಿಸಿದ್ದರು. 2009ರ ಫೆಬ್ರುವರಿಯಲ್ಲಿ ಕಾಂಗ್ರೆಸ್ ಜಂಟಿ ಸಭೆಯನ್ನುದ್ದೇಶಿಸಿ ಬರಾಕ್ ಮಾಡಿರುವ ಭಾಷಣವನ್ನು 52.3ಮಿಲಿಯನ್ ಪ್ರೇಕ್ಷಕರು ನೋಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ