ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೂಮಿಯಲ್ಲಿರುವ ಅತಿ ಕೆಟ್ಟ ದೇಶ ಆಸ್ಟ್ರೇಲಿಯಾ: ಅಧ್ಯಯನ (Australia | sinful nation | Sylvania Waters and Les Patterson | Courier Mail)
Bookmark and Share Feedback Print
 
ಉತ್ಕಟ ಕಾಮಾಸಕ್ತಿ, ದುರಾಸೆ ಮತ್ತು ದುರಂಹಕಾರಗಳು ಸೇರಿದಂತೆ ಏಳು ಮಹಾ ದುಷ್ಕರ್ಮಗಳನ್ನು ಹೊಂದಿರುವ ಆಸ್ಟ್ರೇಲಿಯಾ ಭೂಮಿಯಲ್ಲಿಯೇ ಅತೀ ಕೆಟ್ಟ ರಾಷ್ಟ್ರ ಎಂದು ಸಂಶೋಧನೆಯೊಂದು ಹೇಳಿದೆ.

ಕಾಮದ ಉತ್ಕಟೇಚ್ಛೆ, ಹೊಟ್ಟೆಬಾಕತನ, ದುರಾಸೆ, ಸೋಮಾರಿತನ, ರೋಷ, ಅಸೂಯೆ ಮತ್ತು ದುರಹಂಕಾರಗಳೆಂಬ ಏಳು ಪಾಪಗಳನ್ನು ಹೊತ್ತಿರುವ ಆಸ್ಟ್ಟೇಲಿಯಾ ಅತಿ ಕೆಟ್ಟ ದೇಶಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬಿಬಿಸಿಯ ನಿಯತಕಾಲಿಕೆಯ ವರದಿಯನ್ನು 'ಕೊರಿಯರ್ ಮೇಲ್' ಪತ್ರಿಕೆ ವಿವರಿಸಿದೆ.

ಬಿಬಿಸಿಯ ವಿಜ್ಞಾನ, ತಂತ್ರಜ್ಞಾನ ಮತ್ತು ಭವಿಷ್ಯ ಎಂಬ ನಿಯಕಾಲಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಇಂತಹ ಕೆಟ್ಟ ಹೆಸರು ತರುವ ಪದವಿಯನ್ನು ಆಸ್ಟ್ರೇಲಿಯಾಕ್ಕೆ ನೀಡಲಾಗಿದೆ.

ಅದೇ ಹೊತ್ತಿಗೆ ಅಮೆರಿಕಾವು ಹೊಟ್ಟೆ ಬಾಕತನಕ್ಕೆ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕೊರಿಯಾವು ಉತ್ಕಟ ಕಾಮದ ಬಯಕೆಯಲ್ಲಿ ಅಗ್ರ ಸ್ಥಾನಿಯಾಗಿದೆ.

ದುರಹಂಕಾರ ಮತ್ತು ಸೋಮಾರಿತನ ಎರಡರಲ್ಲೂ ಐಸ್ಲೆಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ಮೆಕ್ಸಿಕೋ ದುರಾಸೆಯಲ್ಲಿ ಅಗ್ರ ಸ್ಥಾನಿ ಎಂದು ಈ ಸಮೀಕ್ಷೆ ಬಹಿರಂಗಪಡಿಸಿದೆ.

ಅಸೂಯೆ ಎನ್ನುವುದು ಆಸ್ಟ್ರೇಲಿಯಾದ ದೊಡ್ಡ ದೌರ್ಬಲ್ಯವಾಗಿದ್ದು, ಎಲ್ಲಾ ಪಾಪಗಳ ಸಾಲಿನಲ್ಲಿ ಅಗ್ರ 10ರೊಳಗೆ ಗುರುತಿಸಿಕೊಳ್ಳುವ ಮೂಲಕ ಅಮೆರಿಕಾ, ಕೆನಡಾ, ಫಿನ್ಲೆಂಡ್ ಅಥವಾ ಬ್ರಿಟನ್‌ಗಳನ್ನು ಹಿಂದಿಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ