ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್ ಯುದ್ಧ, ಸದ್ದಾಂ ಪದಚ್ಯುತಿಗೆ ವಿಷಾದವಿಲ್ಲ: ಟೋನಿ ಬ್ಲೇರ್ (Saddam Hussein | Tony Blair | British prime minister | Iraq war)
Bookmark and Share Feedback Print
 
ಇರಾಕ್‌ನಲ್ಲಿ ನಡೆಸಿದ ಯುದ್ಧ ಮತ್ತು ಸದ್ದಾಂ ಹುಸೇನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು ಸಾರ್ವಜನಿಕ ವಿಚಾರಣೆಯೊಂದರಲ್ಲಿ ಬ್ರಿಟೀಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹೇಳಿದ್ದಾರೆ.

ಈ ಕುರಿತು ತಮಗೆ ವಿಷಾದವಿದೆಯೇ ಎಂದು ಸಾರ್ವಜನಿಕ ವಿಚಾರಣಾ ಪೀಠದ ಅಧ್ಯಕ್ಷರು ಪ್ರಶ್ನಿಸಿದಾಗ ಬ್ಲೇರ್, 'ಜವಾಬ್ದಾರಿ ಮಾತ್ರ, ಸದ್ದಾಂ ಹುಸೇನ್ ಅವರನ್ನು ಪದಚ್ಯುತಿಗೊಳಿಸಿದ್ದಕ್ಕೆ ಪಶ್ಚಾತಾಪವಿಲ್ಲ' ಎಂದರು.

ಈ ಹೊತ್ತಿನಲ್ಲಿ ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳಿತಿದ್ದ ಇರಾಕ್ ಯುದ್ಧದ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದ 179 ಬ್ರಿಟೀಷ್ ಯೋಧರ ಸಂಬಂಧಿಕರು ಬ್ಲೇರ್ ಹೇಳಿಕೆಯನ್ನು ಖಂಡಿಸುತ್ತಾ, ನೀವೊಬ್ಬ ಮಹಾನ್ ಸುಳ್ಳುಗಾರ; ನೀವು ಹಂತಕ ಎಂದೆಲ್ಲಾ ಚುಚ್ಚಿದರು.

ಸಂವಾದದ ಅಧ್ಯಕ್ಷ ಸುಮ್ಮನಿರುವಂತೆ ಸೂಚಿಸಿದಾಗ ಮಾತು ಮುಂದುವರಿಸಿದ ಬ್ಲೇರ್, ನನ್ನ ಪ್ರಕಾರ ಸದ್ದಾಂ ಪೀಡೆಯಾಗಿದ್ದರು. ಅವರು ಬೆದರಿಕೆ ಹಾಕಿದ್ದು ಆ ಪ್ರಾಂತ್ಯಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಎಂದರು.

ನಾವು ಆ ನಂತರ ಎದುರಿಸಿದ ಸನ್ನಿವೇಶಗಳ ಬಗ್ಗೆ ನೀವು ತಿರುಗಿ ನೋಡುವುದಾದರೆ, ನನ್ನ ಪ್ರಕಾರ ಬೆದರಿಕೆಯನ್ನು ಎದುರಿಸುವುದೇ ಅತ್ಯುತ್ತಮ ಹಾದಿಯಾಗಿತ್ತು. ಅಂದರೆ ಅವರನ್ನು ಕಚೇರಿಯಿಂದ ಹೊರ ದಬ್ಬುವುದು ಮತ್ತು ಹಾಗೆ ಮಾಡಿರುವುದರಿಂದ ಈಗ ವಿಶ್ವವೇ ಸುರಕ್ಷಿತ ಭಾವನೆಯಲ್ಲಿದೆ ಎಂಬುದು ನನ್ನ ಭಾವನೆ ಎಂದರು.

2003ರಲ್ಲಿನ ಅಮೆರಿಕಾ ನೇತೃತ್ವದ ಇರಾಕ್ ವಿರುದ್ಧದ ಯುದ್ಧದಲ್ಲಿ ಬ್ರಿಟನ್ ಪಾಲ್ಗೊಂಡ ಹಿಂದಿನ ಕಾರಣಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸಾಕ್ಷ್ಯಗಳ ವಿಚಾರಣೆಯ ಕೊನೆಯ ದಿನ ಬ್ಲೇರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ