ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ನಿಷೇಧಕ್ಕೆ ಕೋರ್ಟ್ ಮೊರೆ ಹೊಕ್ಕ ಫ್ರಾನ್ಸ್ (French | Islamic veil | veil ban | Francois Fillon)
Bookmark and Share Feedback Print
 
ಫ್ರಾನ್ಸ್‌ನಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾವನ್ನು ಪೂರ್ಣಪ್ರಮಾಣದಲ್ಲಿ ನಿಷೇಧಿಸಿರುವ ಕುರಿತು ಸರ್ಕಾರ ನಿರ್ಣಯಿಸಿರುವ ಕಾನೂನಿನ ಬಗ್ಗೆ ಉನ್ನತ ನ್ಯಾಯಾಲಯ ನಿಷ್ಪಕ್ಷಪಾತವಾದ ನೆರವು ನೀಡಬೇಕೆಂದು ಫ್ರೆಂಚ್ ಪ್ರಧಾನಿ ಫ್ರಾಂಕೋಯಿಸ್ ಫಿಲ್ಲೋನ್ ಕೋರಿರುವುದಾಗಿ ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಮುಸ್ಲಿಂ ಮಹಿಳೆಯರು ದೇಶದಲ್ಲಿ ಬುರ್ಖಾ ಹಾಗೂ ಮುಖಗವಸನ್ನು ಧರಿಸುವುದನ್ನು ನಿಷೇಧಿಸಿ ಫ್ರಾನ್ಸ್ ಸಂಸತ್ ನಿರ್ಣಯ ಕೈಗೊಂಡ ತರುವಾಯ ಸರ್ಕಾರ ಇದೀಗ ಅಂತಿಮ ನಿರ್ಧಾರಕ್ಕಾಗಿ ಕೋರ್ಟ್ ಮೊರೆ ಹೋಗಿದೆ. ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಸರ್ಕಾರ, ಇದು ಫ್ರಾನ್ಸ್‌ನ ಕಾನೂನಿಗೆ ವಿರುದ್ಧವಾದದ್ದು ಎಂದು ವಾದಿಸಿದೆ.

ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾ ಅಥವಾ ಮುಖಗವಸನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಕಾನೂನಿನ ಚೌಕಟ್ಟಿನಲ್ಲಿ ಅಧ್ಯಯನ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ಕೋರಿ ಫಿಲ್ಲೋನ್ ಸ್ಟೇಟ್ ಕೌನ್ಸಿಲ್‌ಗೆ ಪತ್ರ ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ