ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ವಿರುದ್ಧ ಉಗ್ರರ ಸಂಚು ಮುಂದುವರಿಯುತ್ತಿದೆ: ಅಮೆರಿಕಾ (India | terror radar | US citizens | Mumbai attack)
Bookmark and Share Feedback Print
 
ಭಾರತದ ಮೇಲೆ ದಾಳಿಗಳನ್ನು ನಡೆಸುವ ಕುರಿತು ಭಯೋತ್ಪಾದನಾ ಸಂಘಟನೆಗಳು ಸಂಚು ರೂಪಿಸುತ್ತಿರುವ ಕುರಿತು ಅಮೆರಿಕಾ ನಿರಂತರ ಮಾಹಿತಿ ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ತನ್ನ ಪ್ರಜೆಗಳು ಭಾರತ ಪ್ರವಾಸ ಮಾಡುವುದಿದ್ದರೆ ಜಾಗರೂಕತೆ ವಹಿಸುವಂತೆ ಸಲಹೆ ಮಾಡಿದೆ.

ಭಾರತದ ಮೇಲೆ ಭಯೋತ್ಪಾದಕ ದಾಳಿಗಳು ನಡೆಯುವ ಸಂಭಾವ್ಯ ಮಾಹಿತಿಗಳನ್ನು ಅಮೆರಿಕಾ ಸತತವಾಗಿ ಸ್ವೀಕರಿಸುತ್ತಿರುವುದರಿಂದ ಅಲ್ಲಿ ಎದುರಾಗಬಹುದಾದ ಪರಿಸ್ಥಿತಿಯ ಕುರಿತು ಅಮೆರಿಕಾವು ತನ್ನ ನಾಗರಿಕರಿಗೆ ಎಚ್ಚರಿಕೆಯನ್ನು ರವಾನಿಸಿದೆ ಎಂದು ಅಮೆರಿಕಾದ ಸ್ಟೇಟ್ ಇಲಾಖೆಯು ತನ್ನ ಇತ್ತೀಚಿನ ಎಚ್ಚರಿಕೆಯಲ್ಲಿ ತಿಳಿಸಿದೆ.

ಅಮೆರಿಕಾ ನಾಗರಿಕರು ಅಥವಾ ಇತರ ಪ್ರಮುಖ ದೇಶಗಳ ನಾಗರಿಕರು ಗುಂಪುಗೂಡುವ ಅಥವಾ ಭೇಟಿ ನೀಡುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯವನ್ನು ಭಯೋತ್ಪಾದಕರು ಮತ್ತು ಅವರ ಪರವಾಗಿರುವವರು ಹೊಂದಿದ್ದಾರೆ ಎಂದು ಅಮೆರಿಕಾ ಹೇಳಿದೆ.

ತನ್ನ ನಾಗರಿಕರಿಗೆ ನೀಡಿದ್ದ ಅಮೆರಿಕಾ ಈ ಹಿಂದಿನ ಎಚ್ಚರಿಕೆಯನ್ನು ಡಿಸೆಂಬರ್ 29ರಂದು ನೀಡಿದ ಪ್ರಯಾಣದ ಸಲಹೆ ಹೊಡೆದು ಹಾಕಿದ್ದು, ಇದು ಏಪ್ರಿಲ್ 30ರವರೆಗೆ ಅನ್ವಯಿಸುತ್ತದೆ ಎಂದು ಸ್ಟೇಟ್ ಇಲಾಖೆಯು ತಿಳಿಸಿದೆ.

2008ರ ಮುಂಬೈ ದಾಳಿಯನ್ನು ಉಲ್ಲೇಖಿಸಿರುವ ಅಮೆರಿಕಾ, ಹೊಟೇಲುಗಳು, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ಭಯೋತ್ಪಾದಕರ ಗುರಿಯಾಗಬಹುದು. ಹಾಗಾಗಿ ತನ್ನ ನಾಗರಿಕರು ಗರಿಷ್ಠ ಸುರಕ್ಷತೆ ಮತ್ತು ಉತ್ಕೃಷ್ಟ ಸಮಯಪ್ರಜ್ಞೆಯನ್ನು ಮೆರೆಯಬೇಕು ಎಂದು ಸಲಹೆ ಮಾಡಿದೆ.

ಅಮೆರಿಕಾ ಪ್ರಜೆಗಳು ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಧಾರ್ಮಿಕ ಕೇಂದ್ರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ಹೊಟೇಲುಗಳು, ರೆಸ್ಟಾರೆಂಟುಗಳು, ಮನರಂಜನಾ ಕೇಂದ್ರಗಳು ಮತ್ತು ಇತರ ವಿಚಾರಗಳ ಆಯ್ಕೆಗಳಿಗೆ ಅನ್ವಯಿಸಗೊಳಿಸಬೇಕು ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ