ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮ್ಯಾನ್ಮಾರ್: ಪತ್ರಕರ್ತನಿಗೆ 13ವರ್ಷ ಜೈಲು ಶಿಕ್ಷೆ (Myanmar | journalist | Burma | junta)
Bookmark and Share Feedback Print
 
ನಿಷೇಧಿತ ಮಾಧ್ಯಮವೊಂದರಲ್ಲಿ ಕರ್ತವ್ಯ ನಿರ್ವಹಿಸಿದ ಆರೋಪದ ಮೇಲೆ ಮ್ಯಾನ್ಮಾರ್ ಕೋರ್ಟ್ ಪತ್ರಕರ್ತನೊಬ್ಬನಿಗೆ 13ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿರುವುದಾಗಿ ಆತನ ಪರ ವಕೀಲರು ಶುಕ್ರವಾರ ತಿಳಿಸಿದ್ದಾರೆ.

ಮ್ಯಾನ್ಮಾರ್ ಮಿಲಿಟರಿ ಜುಂಟಾ ಆಡಳಿತದಿಂದ ನಿಷೇಧಕ್ಕೊಳಗಾಗಿದ್ದ ಡೆಮೋಕ್ರಟಿಕ್ ವಾಯ್ಸ್ ಆಪ್ ಬರ್ಮಾದ ಪತ್ರಕರ್ತ ನಗ್ವೆ ಸೋಯೆ ಲಿನ್ ಶಿಕ್ಷೆಗೊಳಗಾದ ವ್ಯಕ್ತಿ. ಈತ ನಾರ್ವೆಯ ಓಸ್ಲೋದ ನಿವಾಸಿಯಾಗಿರುವುದಾಗಿ ವಕೀಲ ಆಂಗ್ ಥೇಯಿನ್ ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

ನಿಷೇಧಿತ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಲಿನ್‌ಗೆ ಇಲ್ಲಿನ ವಿಶೇಷ ನ್ಯಾಯಾಲಯ 13ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಆದರೆ ಆತನಿಗೆ ಶಿಕ್ಷೆ ವಿಧಿಸಿದ ಬಗ್ಗೆ ಮ್ಯಾನ್ಮಾರ್ ಅಧಿಕಾರಿಗಳು ಈವರೆಗೂ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ.

ಆದರೆ ದೇಶದ ವಿದ್ಯುನ್ಮಾನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ 10ವರ್ಷ ಮತ್ತು ಇಮಿಗ್ರೇಶನ್ ಎಮರ್ಜೆನ್ಸಿ ಪ್ರೊವಿಶನ್ಸ್ ಕಾಯ್ದೆಯಡಿ 3ವರ್ಷಗಳ ಶಿಕ್ಷೆಯನ್ನು ಲಿನ್‌ಗೆ ವಿಧಿಸಿದ್ದು,ಈ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಆತನ ಪರ ವಕೀಲರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ