ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ನಕಲಿ ನೋಟಿನ ಹಿಂದೆ ಪಾಕಿಸ್ತಾನ ಗುಪ್ತಚರರು (Indian currency racket | Pakistani intelligence | India | Bangladesh)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಮುಂತಾದ ಭಯೋತ್ಪಾದಕ ಸಂಘಟನೆಗಳ ಗಡಿಯಾಚೆಗಿನ ಕಾರ್ಯಾಚರಣೆಗಳನ್ನು ಬೆಂಬಲಿಸುವ ಉದ್ದೇಶದಿಂದ ಪಾಕಿಸ್ತಾನದ ಗುಪ್ತಚರ ಇಲಾಖೆಯು ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ನಕಲಿ ನೋಟುಗಳನ್ನು ಚಲಾವಣೆ ತರುತ್ತಿದೆ ಎಂದು ಶನಿವಾರ ಮಾಧ್ಯಮ ವರದಿಯೊಂದು ಹೇಳಿದೆ.

ಬಾಂಗ್ಲಾದೇಶ ಪೊಲೀಸ್ ಇಲಾಖೆ ಮತ್ತು ಬೇಹುಗಾರಿಕಾ ಏಜೆನ್ಸಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿರುವ 'ಪ್ರಥಮ್ ಅಲೋ' ಎಂಬ ಪತ್ರಿಕೆ, ಇಂತಹ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡು ಬಂಧನಕ್ಕೊಳಗಾಗಿರುವ ಹಲವರು ತಮಗೆ ಈ ಕಾರ್ಯದಲ್ಲಿ ಪಾಕಿಸ್ತಾನದ ಒಂದು ಬೇಹುಗಾರಿಕಾ ಏಜೆನ್ಸಿಯು ಬೆಂಬಲ ನೀಡುತ್ತಿದೆ ಮತ್ತು ತಮ್ಮನ್ನು ಕರಾಚಿಯಿಂದಲೇ ನಿಯಂತ್ರಿಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ ಎಂದಿದೆ.

ಬಾಂಗ್ಲಾದೇಶದಲ್ಲಿನ ಇಂತಹ ಕಾರ್ಯಾಚರಣೆಗಳನ್ನು ಸಂಯೋಜಿಸುವ 'ಮಜುಂದಾರ್' ಓರ್ವನನ್ನು ಬಾಂಗ್ಲಾದೇಶದ ಗುಪ್ತಚರ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದು, ಸೆರೆ ಹಿಡಿಯುವ ತಂತ್ರಗಳು ನಡೆಯುತ್ತಿವೆ ಎಂದು ವರದಿ ವಿವರಣೆ ನೀಡಿದೆ.

ನಕಲಿ ನೋಟುಗಳನ್ನು ಚಲಾವಣೆಗೆ ತರುತ್ತಿರುವ ಪ್ರಮುಖ ಉದ್ದೇಶ ಮತ್ತು ಹೆಚ್ಚಿನ ಹಣ ಬಳಕೆಯಾಗುತ್ತಿರುವುದು ಲಷ್ಕರ್ ಇ ತೋಯ್ಬಾದಂತಹ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡಲು ಎಂದು ಢಾಕಾ ಪೊಲೀಸ್ ಆಯುಕ್ತ ಎಕೆಎಂ ಶಾಹಿದುಲ್ ಹಕ್ ಶಂಕೆ ವ್ಯಕ್ತಪಡಿಸಿದ್ದಾರೆ.

ಢಾಕಾ ಹೊಟೇಲೊಂದರಿಂದ 10 ರೂಪಾಯಿ ಮುಖಬೆಲೆಯ ಭಾರತೀಯ ನಕಲಿ ನೋಟುಗಳೊಂದಿಗೆ ಇಬ್ಬರು ಪಾಕಿಸ್ತಾನಿ ಪ್ರಜೆಗಳು (ಓರ್ವ ಮಹಿಳೆ) ಸೇರಿದಂತೆ ಮೂವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ 10 ದಿನಗಳ ನಂತರ ಪತ್ರಿಕೆ ಈ ಮಾಹಿತಿಗಳೊಂದಿಗೆ ವರದಿ ಮಾಡಿದೆ.

ಕಳೆದ ಮೂರು ವರ್ಷಗಳಲ್ಲಿ ಭಾರತೀಯ ನಕಲಿ ನೋಟುಗಳನ್ನು ಚಲಾವಣೆಗೆ ತರಲು ನಾವು ನೇಪಾಳ, ಭಾರತ ಮತ್ತು ಪಾಕಿಸ್ತಾನಗಳಿಗೆ ಹಲವು ಬಾರಿ ಭೇಟಿ ನೀಡಿದ್ದೇವೆ ಎಂದು ಬಂಧಿತರು ಪ್ರಾಥಮಿಕ ವಿಚಾರಣೆ ಸಂದರ್ಭದ್ಲಲಿ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಕನಿಷ್ಠ ಎಂಟು ಪಾಕಿಸ್ತಾನಿ ಮಹಿಳೆಯರನ್ನು ಪೊಲೀಸರು ಗುರುತಿಸಿದ್ದು, ಪ್ರತೀ ಬಾರಿಯ ತಮ್ಮ ಕಾರ್ಯಾಚರಣೆ ಸಂದರ್ಭದಲ್ಲಿ ಕನಿಷ್ಠ ಎರಡು ಕೋಟಿ ರೂಪಾಯಿಗಳ ನಕಲಿ ನೋಟುಗಳನ್ನು ಅವರು ಚಲಾಯಿಸುತ್ತಾರೆ. ಮೂಲಗಳ ಪ್ರಕಾರ ಪ್ರಸಕ್ತ ನಕಲಿ ನೋಟು ಕಾರ್ಯಾಚರಣೆಯಲ್ಲಿ ಏಳು ಶಂಕಿತ ಗುಂಪುಗಳು ಕಾರ್ಯನಿರತವಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ