ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಂಬತ್ತನೇ ವಯಸ್ಸಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಪುಟ್ತಾಯಿ..! (girl gives birth | China | childbirth | Chinese law)
Bookmark and Share Feedback Print
 
ಭಾರತೀಯ ವಿದ್ಯಾಭ್ಯಾಸದ ಕ್ರಮವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮೂರನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯಾಕೆ. ಯಾರದೋ ಅಕ್ರಮ ಸಂತಾನಕ್ಕೆ ಜನ್ಮ ನೀಡುವ ಮೂಲಕ ತಾಯಿಯೆಂಬ ಪಟ್ಟವನ್ನು ಅನಾಮತ್ತಾಗಿ ಅಲಂಕರಿಸಿದ್ದಾಳೆ.

ಇಂತಹ ಅಪರೂಪದ ಪ್ರಸಂಗ ನಡೆದಿರುವುದು ಚೀನಾದ ಈಶಾನ್ಯ ಪ್ರಾಂತ್ಯವೊಂದರಲ್ಲಿ. ಜಿಲಿನ್ ಪ್ರಾಂತ್ಯದ ಚಂಗಾಚನ್ ಎಂಬಲ್ಲಿನ ಆಸ್ಪತ್ರೆಯೊಂದರಲ್ಲಿ ಬಾಲಕಿ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದು, ಮಗು 2.75 ಕೇಜಿ ತೂಗುತ್ತಿದೆ. ಪುಟ್ಟ ಹುಡುಗಿಗೆ ಪ್ರಕೃತಿ ಸಹಜವಾಗಿ ಹೆರಿಗೆಯಾಗಿಲ್ಲ, ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ ಎಂದು ವರದಿಗಳು ಹೇಳಿವೆ.

ಚಂಗಾಚನ್ ನಗರದ 'ಸಿಟಿ ಇವಿನಿಂಗ್ ನ್ಯೂಸ್' ಎಂಬ ಪತ್ರಿಕೆ ಇದನ್ನು ವರದಿ ಮಾಡಿದ್ದು, ಮಗಳು 'ಅಪ್ಪ ಯಾರೆಂದು ಗೊತ್ತಿಲ್ಲದ' ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಹೆತ್ತವರು ಪೊಲೀಸರ ಮೊರೆ ಹೋಗಿದ್ದಾರೆ.

ಬಾಲಕಿ, ಆಕೆಯ ಹೆತ್ತವರು ಮತ್ತು ಆಸ್ಪತ್ರೆ ಇದ್ಯಾವುದರ ಕುರುಹನ್ನೂ ವರದಿಯಲ್ಲಿ ನಮೂದಿಸಲಾಗಿಲ್ಲ. ಆದರೆ ಈ 'ಪುಟ್ತಾಯಿ' ಜಿಲಿನ್ ಪ್ರಾಂತ್ಯದ ಸಂಗ್ಯಾನ್ ನಗರದವಳು ಎಂದು ನರ್ಸ್‌ಗಳು ತಿಳಿಸಿದ್ದಾರೆಂದು ಪತ್ರಿಕೆ ಹೇಳಿದೆ.

ಚೀನಾ ಕಾನೂನುಗಳ ಪ್ರಕಾರ 14ರ ಹರೆಯಕ್ಕಿಂತ ಮೊದಲು ಹುಡುಗಿಯೊಂದಿಗೆ ಯಾರಾದರೂ ಲೈಂಗಿಕ ಚಟುವಟಿಕೆ ನಡೆಸಿದ್ದು ಪತ್ತೆಯಾದಲ್ಲಿ ಅದನ್ನು ಅತ್ಯಾಚಾರವೆಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲಾಗುತ್ತದೆ.

ಬಲ್ಲ ಮೂಲಗಳ ಪ್ರಕಾರ 11 ವರ್ಷದೊಳಗೆ ತಾಯಿಯಾದ ಪ್ರಸಂಗ ಭಾರತ ಅಥವಾ ಚೀನಾಗಳಲ್ಲಿ ಇದುವರೆಗೆ ನಡೆದಿಲ್ಲ. ಒಂಬತ್ತು ವರ್ಷಗಳೊಳಗೆ ಮಗುವಿಗೆ ಜನ್ಮ ನೀಡಿದ ಎರಡೇ ಎರಡು ಪ್ರಸಂಗಗಳು ಇಡೀ ವಿಶ್ವದಲ್ಲಿ ಇದುವರೆಗೆ ನಡೆದಿದೆ ಎಂದು ಮತ್ತೊಂದು ಪತ್ರಿಕೆ ಅಂಕಿ-ಅಂಶಗಳನ್ನು ನೀಡಿದೆ.

ಅತೀ ಕಡಿಮೆ ಪ್ರಾಯದಲ್ಲಿ ಮಗುವಿಗೆ ಜನ್ಮ ನೀಡಿದ ದಾಖಲೆ ಪೆರು ದೇಶದ ಹೆಸರಿನಲ್ಲಿದೆ. ಐದು ವರ್ಷ ಏಳು ತಿಂಗಳ ಪುಟ್ಟ ಬಾಲಕಿಯೊಬ್ಬಳು 1939ರಲ್ಲಿ ಮಗುವೊಂದರ ಜನ್ಮಕ್ಕೆ ಕಾರಣಳಾಗಿದ್ದಳು.

ಅದೇ ದೇಶದಲ್ಲಿ 2006ರಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಮಗುವೊಂದನ್ನು ಹೆತ್ತಿರುವುದು ಎರಡನೇ ದಾಖಲೆ. ಇದುವರೆಗೆ ಐದು ಹುಡುಗಿಯರು ಒಂಬತ್ತನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. 10ನೇ ವಯಸ್ಸಿನ ಒಂಬತ್ತು ಹಾಗೂ 11ನೇ ವಯಸ್ಸಿನ ಎಂಟು ಪ್ರಕರಣಗಳು ದಾಖಲೆಗಳಲ್ಲಿವೆ.
ಸಂಬಂಧಿತ ಮಾಹಿತಿ ಹುಡುಕಿ