ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫ್ರಾನ್ಸ್ ನಂತ್ರ ಜರ್ಮನ್‌ನಲ್ಲೂ ಬುರ್ಖಾ ನಿಷೇಧ! (France | Germany | Burqa ban | Berlin | Islamic women)
Bookmark and Share Feedback Print
 
PTI
ಬುರ್ಖಾ ಧರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿರುವ ಫ್ರಾನ್ಸ್ ಬುರ್ಖಾ ನಿಷೇಧಿಸಲು ಮುಂದಾಗಿರುವ ಬೆನ್ನಲ್ಲೇ, ಜರ್ಮನ್ ಕೂಡ ಬುರ್ಖಾ ನಿಷೇಧ ಕುರಿತಂತೆ ಚರ್ಚೆ ನಡೆಸುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಏತನ್ಮಧ್ಯೆ ಬುರ್ಖಾ ನಿಷೇಧ ಕಾನೂನು ರೂಪಿಸಲು ಸಹಾಯ ಮಾಡುವಂತೆ ಫ್ರಾನ್ಸ್ ಪ್ರಧಾನಿ ಫ್ರಾನ್ಸಿಸ್ಕೋ ಫಿಲ್ಲೋನ್ ಅಲ್ಲಿನ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಫ್ರಾನ್ಸ್ ಸಂಸತ್ ಬುರ್ಖಾ ನಿಷೇಧಕ್ಕೆ ಕರೆ ನೀಡಿದ ಮೂರು ದಿನಗಳಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

ಫ್ರಾನ್ಸ್‌ನಲ್ಲಿ ಬುರ್ಖಾ ನಿಷೇಧಕ್ಕೆ ಮುಂದಾದಂತೆ ಜರ್ಮನಿಯಲ್ಲೂ ನಿಷೇಧ ಹೇರಬೇಕೆಂದು ತುರ್ಕಿಶ್-ಜರ್ಮನ್ ಲಾಲೇ ಆಕ್‌ಗುನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪೂರ್ಣಪ್ರಮಾಣದಲ್ಲಿ ಬುರ್ಖಾವನ್ನು ಧರಿಸುವುದು ಮಾನವ ಹಕ್ಕುಗಳಿಗೆ ಬೆದರಿಕೆ ಒಡ್ಡಿದಂತೆ ಎಂಬುದಾಗಿ ಲಾಲೇ ಫ್ರಾಂಕ್‌ಫರ್ಟರ್ ಡೈಲಿಗೆ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಜರ್ಮನಿ ಕೂಡ ಬುರ್ಖಾ ನಿಷೇಧಿಸುವ ಪ್ರಮುಖ ಸೂಚನೆ ನೀಡಿದಂತಾಗಿದೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಜರ್ಮನಿ, ಶಾಲೆ, ಯೂನಿರ್ವಸಿಟಿ, ಬಿಗಿ ಭದ್ರತಾ ವಲಯ, ಬ್ಯಾಂಕ್, ವಿಮಾನ ನಿಲ್ದಾಣಗಳಲ್ಲಿ ಬುರ್ಖಾಕ್ಕೆ ನಿಷೇಧ ಹೇರಬೇಕೆಂದು ಆಕೆ ಒತ್ತಾಯಿಸಿರುವುದಾಗಿ ಡೈಲಿ ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ