ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ತಾಲಿಬಾನ್ ವರಿಷ್ಠ ಮೆಹ್ಸೂದ್ ಸಾವು: ವರದಿ (al Qaeda | Pakistan | Hakimullah Mehsud | Washington)
Bookmark and Share Feedback Print
 
ಪಾಕಿಸ್ತಾನ್ ತಾಲಿಬಾನ್ ವರಿಷ್ಠ ಹಕಿಮುಲ್ಲಾ ಮೆಹ್ಸೂದ್ ಸಾವನ್ನಪ್ಪಿರುವ ಸಾಧ್ಯತೆಯೇ ಹೆಚ್ಚು ಎಂದು ಪಾಕ್ ಮತ್ತು ಅಮೆರಿಕ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಪಾಕ್ ಸ್ಟೇಟ್ ಟೆಲಿವಿಷನ್ ವರದಿಯೊಂದು ತಿಳಿಸಿದೆ.

ಕಳೆದ ಎರಡು ವಾರಗಳ ಹಿಂದೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಹತನಾಗಿದ್ದಾನೆ ಎಂಬುದು ಅಮೆರಿಕದ ಅಧಿಕಾರಿಗಳು ನಂಬಿಕೆ. ಆದರೆ ಮೆಹ್ಸೂದ್ ಸಾವನ್ನಪ್ಪಿಲ್ಲ ಎಂದು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸಾರಸಗಟಾಗಿ ತಳ್ಳಿಹಾಕಿದೆ.

ಕಳೆದ ವರ್ಷ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೆಹ್ಸೂದ್ ಮತ್ತು ಆತನ ಕುಟುಂಬ ನಾಶವಾಗಿರುವುದಾಗಿ ಪಾಕಿಸ್ತಾನ್ ಮಿಲಿಟರಿ ಕೂಡ ಬಲವಾಗಿ ಶಂಕಿಸಿದೆ ಎಂದು ಹೇಳಿರುವ ವರದಿ, ಇದು ಅಧಿಕೃತವಾಗಿ ಖಚಿತವಾಗಿಲ್ಲ ಎಂದು ತಿಳಿಸಿದೆ.

ಆದರೂ ಕೂಡ ಇಸ್ಲಾಮಾಬಾದ್ ಮತ್ತು ಪೇಶಾವರದ ಅಧಿಕಾರಿಗಳು ಮೆಹ್ಸೂದ್ ಸತ್ತಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಅಧಿಕೃತವಾದ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ